ಉದುರುಬ್ಯಾಳಿ ಪಲ್ಯ

–  ಸವಿತಾ.

ಉದುರು ಬೇಳೆ ಪಲ್ಯ
ಬೇಕಾಗುವ ಪದಾರ‍್ತಗಳು:

1 ಬಟ್ಟಲು ತೊಗರಿಬೇಳೆ

1 ಈರುಳ್ಳಿ

2 ಚಮಚ ಒಣ ಕಾರ

4-5 ಬೆಳ್ಳುಳ್ಳಿ ಎಸಳು

15-20 ಕರಿಬೇವು ಎಲೆ

ಸ್ವಲ್ಪ ಕೊತ್ತಂಬರಿ ಸೊಪ್ಪು

1/2 ಚಮಚ ಜೀರಿಗೆ

1 ಲವಂಗ

ರುಚಿಗೆ ತಕ್ಕಶ್ಟು ಉಪ್ಪು

1/4 ಚಮಚ ಅರಿಶಿಣ

2 ಚಮಚ ಹುಣಸೆ ರಸ

1/2 ಚಮಚ ಬೆಲ್ಲ

3 ಚಮಚ ಎಣ್ಣೆ

ಮಾಡುವ ವಿದಾನ:

ತೊಗರಿಬೇಳೆ ತೊಳೆದು ಕುಕ್ಕರಿನಲ್ಲಿ ಒಂದು ಕೂಗು ಕುದಿಸಿ ಇಳಿಸಿ.

ಈರುಳ್ಳಿ ಸಣ್ಣ ಕತ್ತರಿಸಿ, ಬೆಳ್ಳುಳ್ಳಿ ಸ್ವಲ್ಪ ಜಜ್ಜಿ ಇಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಈಗ ಒಗ್ಗರಣೆ ಮಾಡಲು ಸಾಸಿವೆ, ಜೀರಿಗೆ, ಕರಿಬೇವು ಮತ್ತು ಬೆಳ್ಳುಳ್ಳಿ ಎಸಳು, ಲವಂಗ ಮತ್ತು ಕತ್ತರಿಸಿದ ಈರುಳ್ಳಿ ಹಾಕಿ ಹುರಿಯರಿ. ಕುದಿಸಿ ಇಟ್ಟ ತೊಗರಿ ಬೇಳೆ ಸೇರಿಸಿ. ಸ್ವಲ್ಪ ಅರಿಶಿಣ ಮತ್ತು ಉಪ್ಪು, ಒಣಕಾರ ಸೇರಿಸಿ ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ, (ತೊಗರಿ ಬೇಳೆ ಹಿಂದಿನ ದಿನ ನೆನೆಸಿ ಮರುದಿನ ಕುದಿಸಬಹುದು) ಆದರೆ ಬೇಳೆ ಒಡೆಯಬಾರದು ಸ್ವಲ್ಪ ಗಟ್ಟಿ ಇರಬೇಕು. ಹುಣಸೆ ರಸ ಮತ್ತು ಬೆಲ್ಲ ಸೇರಿಸಿ ಕೈಯಾಡಿಸಿ ಒಲೆ ಆರಿಸಿ. ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮೇಲೆ ಹಾಕಿ ಅಲಂಕಾರ ಮಾಡಿ. ಈಗ ಉದುರು ಬ್ಯಾಳಿ ಪಲ್ಯ ಚಪಾತಿ ಅತವಾ ರೊಟ್ಟಿ ಜೊತೆ ಸವಿಯಲು ಸಿದ್ದ .

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಮಾರಿಸನ್ ಮನೋಹರ್ says:

    ಕಡಲೆ ಬೇಳೆ ಯಿಂದಲೂ ಇದನ್ನು ಮಾಡುತ್ತಾರೆ

ಅನಿಸಿಕೆ ಬರೆಯಿರಿ: