ಕವಿತೆ : ಜೀವ ತುಂಬೊ ಮಳೆಯೆ ಮುನಿದಿದೆ
– ಶಾಂತ್ ಸಂಪಿಗೆ.
ಇಳೆಗೆ ಜೀವಕಳೆಯ ನೀಡಿ
ಬೂರಮೆಗೆ ಹಸಿರು ತುಂಬಿ
ಜೀವರಾಶಿ ಹಸಿವ ತಣಿಸೊ
ಮಳೆ ಹನಿಗೆ ನೆರೆ ಹೆಸರು
ನಿತ್ಯ ವೈಬವದ ಬದುಕಿಗಾಗಿ
ಅತಿ ಆಸೆಗೆ ಸಾಕ್ಶಿಯಾಗಿ
ಅಗತ್ಯ ಮೀರಿ ಬಯಕೆ ಸಾಗಿದೆ
ಕೊನೆಯೆಂಬುದು ಎಲ್ಲಿದೆ
ಅನಂತ ಮೂಕ ಜೀವರಾಶಿ ಕೊಂದು
ಎಲ್ಲ ತಿಳಿದ ಬ್ರಮೆಯಲಿ ಮಿಂದು
ಮನುಶ್ಯತ್ವ ನಿತ್ಯ ನಂದಿದೆ
ಪ್ರಕ್ರುತಿಯು ಬಳಲಿ ಕುಂದಿದೆ
ಪ್ರಕ್ರುತಿ ಸಹಜ ಬದುಕು ಬೇಕು
ಕಾಡಿನ ಮಾರಣ ಹೋಮ ಸಾಕು
ವನ್ಯಜೀವಿಗಳು ಅಬಯದಿ ಉಳಿಬೇಕು
ಪಕ್ಶಿ ಸಂಕುಲ ಸ್ವಚ್ಚಂದ ಹಾರಬೇಕು
ಮನುಶ್ಯನ ವಿಕ್ರುತಿಗೆ ಪ್ರಕ್ರುತಿ ನೊಂದಿದೆ
ಜೀವ ತುಂಬೊ ಮಳೆಯೆ ಮುನಿದಿದೆ
ಮನ ಮನದಿ ಬದಲಾವಣೆ ಬಯಸಿದೆ
ಸರಳ ಸಹಜವಾಗಿ ಬದುಕು ಎಂದಿದೆ
ಮನುಶ್ಯ ಒಬ್ಬ ಬದುಕ ಅರಿತರೆ
ಪ್ರಕ್ರುತಿಗೆ ಪೂರಕ ಅನ್ವೇಶಣೆ ಮಾಡಿದರೆ
ನೆರೆ ತೊರೆಯು ಎಂದೂ ಬಾರದು
ಬರದ ಚಾಯೆ ಎಂದೂ ಸುಳಿಯದು
( ಚಿತ್ರ ಸೆಲೆ : bbc.com )
ಇತ್ತೀಚಿನ ಅನಿಸಿಕೆಗಳು