ಸೆಪ್ಟಂಬರ್ 9, 2019

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯಾ. (408-40) ಆತ್ಮಸ್ತುತಿ=ವ್ಯಕ್ತಿಯು ತನ್ನ ನಡೆನುಡಿಗಳನ್ನು ತಾನೇ ದೊಡ್ಡದಾಗಿ ಇತರರ ಮುಂದೆ ಹೊಗಳಿಕೊಳ್ಳುವುದು/ಗುಣಗಾನ ಮಾಡುವುದು/ಬಣ್ಣಿಸುವುದು; ಸ್ತುತಿ=ಹೊಗಳಿಕೆ/ಕೊಂಡಾಟ/ಗುಣಗಾನ; ಪರ=ಬೇರೆಯ/ಅನ್ಯ/ಇತರ; ನಿಂದೆ=ತೆಗಳಿಕೆ/ಬಯ್ಯುವಿಕೆ/ಕಡೆಗಣಿಸಿ ಮಾತನಾಡುವುದು; ಪರನಿಂದೆ=ಇತರರ ನಡೆನುಡಿಯನ್ನು ಕುರಿತು ಅಣಕಿಸುತ್ತ/ಟೀಕಿಸುತ್ತ/ಹಂಗಿಸುತ್ತ/ಕಡೆಗಣಿಸುತ್ತ ಮಾತನಾಡುವುದು/ಬಯ್ಯುವುದು/ತೆಗಳುವುದು;ಕೇಳಿಸದಿರು+ಅಯ್ಯಾ;...