ನಗು ನಗುತಾ ನಲಿ ನಲಿ…

– ಪ್ರಕಾಶ್‌ ಮಲೆಬೆಟ್ಟು.

ನಗು, smile

ಗೆಳೆಯರೇ ಇಂದಿನ ನಮ್ಮ ಜೀವನ ತುಂಬಾ ಕಟಿಣ , ಜಟಿಲ ಹಾಗು ಕ್ಶೋಬೆಯಿಂದ ಕೂಡಿರುತ್ತೆ. ಆದರೆ ಜೀವನದ ಜಟಿಲತೆಯನ್ನು ಸಡಿಲಮಾಡಲು ನಮಗೆ ಬೇಕಾಗಿರುವುದು ಒಂದು ಚಿಕ್ಕ ಮದ್ದು, “ನಮ್ಮ ನಗು”. ನಗು ನಮ್ಮೆಲ್ಲ ದುಕ್ಕವನ್ನು ತಾತ್ಕಾಲಿಕವಾಗಿಯಾದರೂ ಕಡಿಮೆ ಮಾಡಿಬಿಡುತ್ತೆ. ಆದರೆ ನಗಿಸಬೇಕಾದವರು ಯಾರು? ಹೇಗೆ ನಗಿಸಬೇಕು? ಎಂದು ಪ್ರಶ್ನಿಸಿಕೊಂಡರೆ ಅದಕ್ಕೆ ಉತ್ತರ ಕೂಡ ನಾವೇ. ಮೊದಲಿಗೆ ನಾವು ನಗುವುದನ್ನು ಕಲಿಯಬೇಕು. ನಾವು ಮನಪೂರ‍್ವಕ ನಕ್ಕಾಗ ಮಾತ್ರ ಬೇರೆಯವರನ್ನು ನಗಿಸಲು ನಮ್ಮಿಂದ ಸಾದ್ಯ. ನಾನು ಗಂಬೀರ ಸ್ವಬಾವದವ/ದವಳು, ನಗಲು/ನಗಿಸಲು ನನಗೆ ಗೊತ್ತಿಲ್ಲ ಅಂತ ನಾವು ಹೇಳಿಕೊಳ್ಳಬಹುದು. ಕೆಲವು ಗುಣಗಳು ಹುಟ್ಟಿನಿಂದಲೇ ನಮಗೆ ಬಂದಿರುವುದಿಲ್ಲ . ಪ್ರಯತ್ನ ಪಟ್ಟು ನಾವು ನಮ್ಮನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.

ನಗುವಿಗೆ ಒಂದು ಅಮೋಗ ಶಕ್ತಿ ಇದೆ. ಎಲ್ಲ ನೋವನ್ನು ಮರೆಸಿಬಿಡುವ ಸುಲಬ ಔಶದಿಯೇ “ನಮ್ಮ ನಗು”. ನಗಿಸುವುದು ಕೂಡ ಒಂದು ಕಲೆ! ಎಲ್ಲರಿಗೆ ಅದು ಸಿದ್ದಿಸಿರುವುದಿಲ್ಲ. ಆದರೆ ನಗಿಸುವ ಕಲೆ ಗೊತ್ತಿರುವವರು, ಇತರರನ್ನು ಚುಂಬಕ ಶಕ್ತಿಯಂತೆ ತಮ್ಮತ್ತ ಆಕರ‍್ಶಿಸುತ್ತಾರೆ.  ನಗಿಸುವುದು ಸುಲಬವಲ್ಲ ಆದರೆ ಪ್ರಯತ್ನ ಪಟ್ಟರೆ ಕಂಡಿತವಾಗಿಯೂ ನಮಗೆ ನಗಿಸಲು ಸಾದ್ಯ ಮತ್ತು ನಗಲೂ ಸಾದ್ಯ. ನಗುಮೊಗದಿಂದ ಮಾತನಾಡುವವರನ್ನು ಎಲ್ಲರೂ ಇಶ್ಟ ಪಡುತ್ತಾರೆ ಅಶ್ಟೇ ಅಲ್ಲ ಯಾವ ಕೆಲಸ ಬೇಕಾದ್ರು ಇತರರರಿಂದ ಸುಲಬವಾಗಿ ಮಾಡಿಸಿಕೊಳ್ಳುವ ಚಾತಿ ಅವರಲ್ಲಿರುತ್ತೆ. ಕಶ್ಟಸಾದ್ಯವಾದ ಕೆಲಸವನ್ನು ಸುಲಬ ಮಾಡುವ ಶಕ್ತಿ ನಗುವಿನಲ್ಲಿದೆ.

ನಿನ್ನ ನಗುವನ್ನು ನಾನು ಇಶ್ಟಪಡುತೇನೆ!

ಹೌದು, ಬೇರೆಯವರ ನಗುವನ್ನು ಕಂಡಿತವಾಗಲೂ ನಾವು ಇಶ್ಟಪಡುತೇವೆ. ಅಪ್ಪ ಅಮ್ಮನ ಕಣ್ಣಿನಲ್ಲಿ ಕಾಣಿಸುವ ಹೆಮ್ಮೆಯ ನಗು, ಅಣ್ಣ ತಮ್ಮ ಅಕ್ಕ ತಂಗಿಯರ ಮುಕದ ಮೇಲೆ ಕಾಣಿಸುವ ಪ್ರೀತಿಯ ನಗು, ಸ್ನೇಹಿತರ ಮುಕದ ಮೇಲೆ ಕಾಣಿಸುವ ಸಂತೋಶದ ನಗು, ಅಪರಿಚಿತರ ಸಮಾದಾನದ ನಗು, ಮಕ್ಕಳ ಮುಗ್ದ ನಗು ಹೀಗೆ ಅನೇಕ ನಗು ನಮಗೆ ಇಶ್ಟವಾಗುತ್ತದೆ. ಆದರೆ ಆ ನಗುವಿಗೆ ಕಾರಣ ನಾವಾಗಬೇಕು. ಅಮ್ಮ ಹೆಮ್ಮೆಯಿಂದ ನಗುವಂತಹ ಸಾದನೆ ನಾವು ಮಾಡಬೇಕು. ನಮ್ಮ ಸಹೋದರ ಸಹೋದರಿಯರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿ , ಅವರ ಮುಕದ ಮೇಲೆ ಪ್ರೀತಿಯ ನಗು ಮೂಡಿಸಬೇಕು. ನಮ್ಮ ಒಳ್ಳೆತನದಿಂದ ಸ್ನೇಹಿತರ ಮನಗೆದ್ದು ಅವರ ಮೊಗದಲ್ಲೂ ಸಂತೋಶದ ನಗು ತರಿಸಬೇಕು. ಅಪರಚಿತ ದಾರಿಹೋಕ ಕೂಡ ಯಾವುದಾದರು ಸಹಾಯ ಕೇಳಿದಾಗ ನಮ್ಮಿಂದ ಸಹಾಯ ಮಾಡಲು ಸಾದ್ಯವಾಗುತ್ತದೆಯಾದ್ರೆ ಸಹಾಯ ಮಾಡಿ ಅವರ ಮುಕದಲ್ಲಿ ಸಮಾದಾನದ ನಗು ತರಿಸಬೇಕು. ಮಕ್ಕಳೊಂದಿಗೆ ಮಕ್ಕಳಾಗಿ ಅವರ ನಗುವಿಗೆ ನಾವು ಕಾರಣರಾಗಬೇಕು. ಆಗ ಮಾತ್ರ ನಮ್ಮ ಜೀವನಕ್ಕೆ ಒಂದು ಅರ‍್ತ ಸಿಗುತ್ತದೆ

“ನಗು” ಮೂಡಿಸುವ ಜೀವನದ ಕೆಲವೂ ಸಣ್ಣ ಸಣ್ಣ ಗಟನೆಗಳನ್ನು ಮೆಲಕು ಹಾಕಿದಾಗ ನಮ್ಮ ಮೊಗ ಅರಳುತ್ತದೆ. ನಗುವಿಗೆ ಎಲ್ಲ ನೋವನ್ನು ಮರೆಸುವ ಒಂದು ಅದ್ಬುತ ಶಕ್ತಿ ಇದೆ. ಆದರೆ ನಾವು ನಕ್ಕರೆ ಸಾಲದು. ಇನ್ನೊಬ್ಬರ ನಗುವಿಗೆ ನಾವು ಕಾರಣರಾಗಬೇಕು. ಅವಾಗ ನಮ್ಮ ಜೀವನ ಸಾರ‍್ತಕ ಎನಿಸುತ್ತದೆ.

ಮಗು ಮತ್ತು ಅಪ್ಪ

“ಮುಗ್ದ ನಗು ” ಎಂದೊಡನೆ ನಮಗೆ ನೆನಪು ಬರುವುದು ಮಕ್ಕಳು. ಎಶ್ಟೊಂದು ಮುಗ್ದರು ಅವರು. ಮನೆಯಲ್ಲಿ ಒಂದು ಮಗು ಇದ್ರೆ ಆ ಮನೆ ಸ್ವರ‍್ಗಕ್ಕಿಂತ ದೊಡ್ಡದು. ಆ ಮಗುವಿನ ತುಂಟಾಟಗಳು, ನಿಮ್ಮ ಮೇಲೆ ಅದು ಇಟ್ಟಿರುವ ನಂಬಿಕೆ, ಪದಗಳಿಂದ ವರ‍್ಣಿಸಲು ಅಸಾದ್ಯ. ನೀವೆಶ್ಟೇ ಕೋಪಿಶ್ಟರಾಗಿದ್ರು, ನಿಮ್ಮ ಕೋಪವನ್ನು ಮರೆಮಾಡುವ ಶಕ್ತಿ ಮಗುವಿನ ನಗುವಿನಲ್ಲಿದೆ. ನಿಮ್ಮ ಕಚೇರಿಯಲ್ಲಿ ಎಶ್ಟೇ ತೊಂದರೆ ಇರಲಿ, ದಿನ ವಿಡಿ ಕಚೇರಿ ಕೆಲಸದಲ್ಲಿ ಬೆಂಡಾಗಿ ಬಸವಳಿದು ಮನೆಗೆ ಬರುತ್ತೀರಿಯಾದ್ರು, ನಿಮ್ಮ ಮನೆಯಲ್ಲೂ ಒಂದು ಪುಟ್ಟ ಪಾಪು ಇದ್ರೆ ನಿಮ್ಮೆಲ್ಲ ನೋವನ್ನು ಒಂದೇ ಕ್ಶಣದಲ್ಲಿ ಆ ಪಾಪುವಿನ ನಗು ಮರೆಸಿಬಿಡುತ್ತದೆ. ಮಗುವಿನ ಮನಸು ನಿಶ್ಕಳಂಕವಾಗಿರುತ್ತದೆ. ಮಗು ತನ್ನ ತೊದಲು ನುಡಿಯಿಂದ ಅಪ್ಪ ಅಪ್ಪ ಅಂತ ಕರೆದು ಗಮನ ಸೆಳೆಯಲು ಪ್ರಯತ್ನ ಪಡುತ್ತದೆ. ಅಪ್ಪ ತಿರುಗಿ ನೋಡಿದಾಗ ತನ್ನ ಬೊಚ್ಚು ಬಾಯನ್ನು ಅಗಲಿಸಿ ಒಂದು ಮುಗ್ದ ನಗುವನ್ನು ಹೊರ ಸೂಸುತ್ತದೆ. ಅಪ್ಪ, ಮಗುವಿನ ಮುಗ್ದ ನಗುವಿಗೆ ತನ್ನೆಲ್ಲ ಕೋಪ ತಾಪಗಳನ್ನು ಮರೆತು ಓಡಿ ಬಂದು ಮಗಳನ್ನು ಎತ್ತಿಕೊಂಡು ಮುದ್ದಾಡುತ್ತಾನೆ. ಒಂದು ಮುಗ್ದ ನಗು ಆತನ ಎಲ್ಲ ದುಕ್ಕ ಸಂಕಟಗಳನ್ನು ಮರೆಸುವುದು.

ಹದಿಹರೆಯದ ಹುಡುಗ ಹುಡುಗ ಹುಡುಗಿ

ಹದಿಹರೆಯ ಎನ್ನುವುದು ಕನಸು ಕಾಣುವ ಹರೆಯ. ಹುಡುಗ, ಹುಡುಗಿಯ ಮುಕದಲ್ಲಿ ನಗು ನೋಡಲು ಪರದಾಡುವುದನ್ನು ನೋಡುವುದೇ ಒಂದು ಮೋಜು. ಅಮಲುಗಣ್ಣಿನ ಹುಡುಗಿ, ಅವಳ ನೀಳ ಕೇಶ ರಾಶಿ , ಹಣೆಯ ಮೇಲಿನ ಚಿಕ್ಕ ಬಿಂದಿ, ಕುತ್ತಿಗೆಯ ಮೇಲಿನ ಸಣ್ಣ ಮಚ್ಚೆ ಎಲ್ಲವೂ ಆತನಿಗೆ ಚಿರಪರಿಚಿತ. ಅವಳ ಹೆಸರನ್ನು ಕೈಯ ಮೇಲೆ ಹಚ್ಚೆ ಹಾಕಿಸಿಕೊಳ್ಳಲು ಹೇಸದ ಹರೆಯ. ಇಂತ ಹುಡುಗ ಯಾವಾಗಲು ಆ ಹುಡುಗಿಯ ಮೊಗದಲ್ಲಿ ನಗು ನೋಡಲು ಸದಾ ಹಾತೊರೆಯುತ್ತಿರುತ್ತಾನೆ. ಮುಂದೆ ಕುಳಿತಿದ್ದರೆ ಪದೇ ಪದೇ ಹಿಂದಿರುಗಿ ಅವಳ ಕಡೆಗೆ ಓರೇ ನೋಟ ಬೀರುವುದು, ಅವಳು ತಿರುಗಿ ನೋಡಿ ನಕ್ಕಾಗ ಇವನು ತನ್ನನ್ನು ತಾನೇ ಮರೆತು ಬಿಡುತ್ತಾನೆ. ಅವಳ ನಗುವನ್ನು ತುಂಬಾನೇ ಇಶ್ಟಪಡುತ್ತಾನೆ ಮತ್ತು ಆ ನಗುವಿಗೆ ಕಾರಣ ತಾನಾಗುವುದನ್ನು ಪ್ರೀತಿಸುತ್ತಾನೆ.

ಅಮ್ಮ ಅಪ್ಪ ಮತ್ತು ಬೆಳೆದು ನಿಂತ ಮಕ್ಕಳು

ಪರ ಊರಿನ ಹಾಸ್ಟೆಲ್ ನಲ್ಲಿ ಓದುತ್ತಿರುವ ಮಗ/ಮಗಳು ರಜೆಯಲ್ಲಿ ಊರಿಗೆ ಬರುವಾಗ ಅಮ್ಮನ ಸಡಗರ ಹೇಳತೀರದು. ಮಗಳು ತುಂಬಾ ಇಶ್ಟ ಪಡುವ ಗೆಣಸಿನ ತಿಂಡಿ ಮಾಡಿ ಮಗಳಿಗೆ ಸಂಬ್ರಮದಿಂದ ಕಾಯುವ ಅಮ್ಮ, ಮನೆಗೆ ಬಂದ ಮಗಳು, ತನ್ನ ಅಚ್ಚು ಮೆಚ್ಚಿನ ತಿಂಡಿಯನ್ನು ನೋಡಿ, ಅದನ್ನು ತಿಂದು ಸಂತೋಶ ಪಟ್ಟಾಗ ಅಮ್ಮನ ಮುಕದ ಮೇಲೆ ನೆಮ್ಮದಿಯ ನಗೆ. ಮಗನ ಪರೀಕ್ಶೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ‍್ಣನಾದಾಗ ಅಪ್ಪನ ಮುಕದಲ್ಲಿ ಹೆಮ್ಮೆಯ ನಗೆ. ಅಪ್ಪನ ಮುಕದಲ್ಲಿನ ಸಂತೋಶ ಕಂಡು ಮಗನಲ್ಲಿ ಸಮಾದಾನದ ನಗೆ. ಮಕ್ಕಳ ಸಾದನೆಗೆ ಹೆಮ್ಮೆ ಪಡುವ ತಂದೆ ತಾಯಿಗಳು. ಅವರು ಹೆಮ್ಮೆ ಪಡುವಂತ ಸಾದನೆ ಮಾಡುವ ಮಕ್ಕಳು.

ಗಂಡ ಮತ್ತು ಹೆಂಡತಿ

ಕಚೇರಿಯ ಕೆಲಸ ಮುಗಿಸಿ, ಸುಸ್ತಾಗಿ ಮನೆಗೆ ಬರುವಾಗ ಬಿಸಿ ಬಿಸಿ ಕಾಪಿ ಮಾಡಿಕೊಟ್ಟು ಉಪಚರಿಸುವ ಪತ್ನಿಯ ಕಂಡು ಪ್ರೀತಿಯ ಹೂನಗೆ ಬೀರುವ ಪತಿ. ಪತಿಯ ಹೂನಗೆ ಕಂಡು ನಾಚಿಕೆಯ ನಗೆ ಸೂಸುವ ಪತ್ನಿಯ ಮನಸಿನಲ್ಲಿ ನೆಮ್ಮದಿಯ ನಿಟ್ಟುಸಿರು. ಸಂಜೆ ಕೆಲಸದಿಂದ ಬೇಗನೆ ಬರುವ ಪತ್ನಿ, ಪತ್ನಿ ಕೆಲಸದಿಂದ ಬರುವ ಮೊದಲು ಅಡುಗೆ ಮಾಡಿಟ್ಟು ಬಿಸಿ ಬಿಸಿ ಉಪ್ಪಿಟ್ಟು ಮತ್ತು ಕಾಪಿಯೊಂದಿಗೆ ಹೆಂಡತಿಯನ್ನು ಸ್ವಾಗತಿಸಿದರೆ ಎಶ್ಟೊಂದು ಸಂತೋಶದ ನಗೆ ಅವಳ ಮುಕದಲ್ಲಿ. ಹೆಂಡತಿಯನ್ನು ಸಂತೋಶ ಪಡಿಸಿದೆನೆಂಬ ಹೆಮ್ಮೆಯ ನಗೆ ಗಂಡನ ಮುಕದಲ್ಲಿ.

ಹೀಗೆ ಜೀವನದ ಪ್ರತಿಕ್ಶಣದಲ್ಲೂ, ನಮಗೆ ಇತರರನ್ನು ನಗಿಸಿ ನಮ್ಮ ಪ್ರಪಂಚವನ್ನು ಮತ್ತಶ್ಟು ಸುಂದರ ಮಾಡುವ ಅವಕಾಶವನ್ನು, ಬದುಕನ್ನು ಬಗವಂತ ಒದಗಿಸಿಕೊಟ್ಟಿದ್ದಾನೆ. ಇಂತಹ ಸುಂದರ ಅವಕಾಶವನ್ನು, ಹಾಳು ಮಾಡದೇ ಬಳಸಿಕೊಳ್ಳಬೇಕಾದದ್ದು ನಮ್ಮ ಕರ‍್ತವ್ಯ.

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Kiran G says:

    ಅದ್ಭುತವಾದ ಬರಹ

ಅನಿಸಿಕೆ ಬರೆಯಿರಿ:

%d bloggers like this: