ಡೊಣಮೆಣಸಿನಕಾಯಿ ಬಜ್ಜಿ ಮಾಡೋದು ಹೇಗೆ?

– ಕಲ್ಪನಾ ಹೆಗಡೆ.

ಬಜ್ಜಿ, Bajji

ಏನೇನು ಬೇಕು?

• 10 ಡೊಣಮೆಣಸಿನಕಾಯಿ (ಚಿಕ್ಕ ಗಾತ್ರದ್ದು)
• 150 ಗ್ರಾಂ ಕಡ್ಲೆಹಿಟ್ಟು
• 100 ಗ್ರಾಂ ಅಕ್ಕಿಹಿಟ್ಟು
• ಅರ‍್ದ ಚಮಚ ಓಮಿನಕಾಳು
• ಕಾಲು ಚಮಚ ಮೆಣಸಿನ ಪುಡಿ
• ಇಂಗು
• ರುಚಿಗೆ ತಕ್ಕಶ್ಟು ಉಪ್ಪು
• ಎಣ್ಣೆ

ಮಾಡೋದು ಹೇಗೆ?

ಮೊದಲು ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಓಮಿನಕಾಳು, ಇಂಗು, ನೀರು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ. ಡೊಣಮೆಣಸಿನಕಾಯಿಯನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಕೊಳ್ಳಿ. ಆ ಬಳಿಕ ಒಂದು ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾದನಂತರ ಹೆಚ್ಚಿಟ್ಟ ಡೊಣಮೆಣಸಿನಕಾಯಿ ತುಂಡನ್ನು ಹಿಟ್ಟಿನಲ್ಲಿ ಅದ್ದಿ ಬಿಡಿ. ಜಾಲಿ ಸೌಟಿನಿಂದ ಎರಡು ಕಡೆ ತಿರುಗಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ತಯಾರಿಸಿದ ಮೆಣಸಿನಕಾಯಿ ಬಜ್ಜಿಯನ್ನು ಟೊಮೇಟೊ ಸಾಸಿನೊಂದಿಗೆ ಅತವಾ ಚಟ್ನಿಯೊಂದಿಗೆ ತಿನ್ನಲು ನೀಡಿ.

(ಚಿತ್ರ ಸೆಲೆ: ಕಲ್ಪನಾ ಹೆಗಡೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: