ಕುಸುಬಿ ಸೊಪ್ಪಿನ ಪಲ್ಯ

– ಸವಿತಾ.

kesuvina soppina palya, ಕೆಸುವಿನ ಸೊಪ್ಪಿನ ಪಲ್ಯ

ಬೇಕಾಗುವ ಪದಾರ‍್ತಗಳು

  • ಕುಸುಬಿ ಸೊಪ್ಪು – 1 ಕಟ್ಟು
  • ಬೆಳ್ಳುಳ್ಳಿ – 1 ಗಡ್ಡೆ
  • ಹಸಿ ಮೆಣಸಿನಕಾಯಿ – 2 -3
  • ಜೀರಿಗೆ – 1/2 ಚಮಚ
  • ಸಾಸಿವೆ – 1/2 ಚಮಚ
  • ಎಣ್ಣೆ – 3 ಚಮಚ
  • ಜೀರಿಗೆ – 1/2 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು
  • ಅರಿಶಿಣ ಪುಡಿ – ಸ್ವಲ್ಪ

ಮಾಡುವ ಬಗೆ

ಕುಸುಬಿ ಸೊಪ್ಪು ತೊಳೆದು ಕತ್ತರಿಸಿ ಇಟ್ಟುಕೊಳ್ಳಿ. ಬೆಳ್ಳುಳ್ಳಿ ಎಸಳು ಬಿಡಿಸಿ, ಹಸಿ ಮೆಣಸಿನಕಾಯಿ, ಸ್ವಲ್ಪ ಜೀರಿಗೆಯೊಂದಿಗೆ ಜಜ್ಜಿಕೊಳ್ಳಿ.

ಎಣ್ಣೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಸಾಸಿವೆ, ಜೀರಿಗೆ ಹಾಕಿ ಹುರಿಯಿರಿ. ನಂತರ ಜಜ್ಜಿದ ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕತ್ತರಿಸಿದ ಕುಸುಬಿ ಸೊಪ್ಪು ಹಾಕಿ ಚೆನ್ನಾಗಿ ಹುರಿಯಿರಿ. ಉಪ್ಪು, ಅರಿಶಿಣ ಸೇರಿಸಿ, ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ.

ಈಗ ಆರೋಗ್ಯ ಕರ ಕುಸುಬಿ ಸೊಪ್ಪಿನ ಪಲ್ಯ ಸವಿಯಲು ಸಿದ್ದ. ಜೋಳದ ರೊಟ್ಟಿ ಜೊತೆ ಸವಿಯಿರಿ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: