ಮೂಲಂಗಿ ಕಾಯಿ ಪಲ್ಯ

– ಸವಿತಾ.

ಮೂಲಂಗಿ ಪಲ್ಯ

ಬೇಕಾಗುವ ಪದಾರ‍್ತಗಳು:

1 ಬಟ್ಟಲು ಮೂಲಂಗಿ ಕಾಯಿ
2 ಹಸಿ ಮೆಣಸಿನಕಾಯಿ
1 ಒಣ ಮೆಣಸಿನಕಾಯಿ
1 ಈರುಳ್ಳಿ
4 ಬೆಳ್ಳುಳ್ಳಿ ಎಸಳು
1/2 ಚಮಚ ಗುರೆಳ್ಳು
1/2 ಚಮಚ ಎಳ್ಳು
2 ಚಮಚ ಒಣ ಕೊಬ್ಬರಿ ತುರಿ
ಸ್ವಲ್ಪ ಜೀರಿಗೆ
4 ಚಮಚ ಎಣ್ಣೆ
5-6 ಎಲೆ ಕರಿಬೇವು
1/2 ಚಮಚ ಜೀರಿಗೆ
1/2 ಚಮಚ ಸಾಸಿವೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಅರಿಶಿಣ
ರುಚಿಗೆ ತಕ್ಕಶ್ಟು ಉಪ್ಪು
1 ಚಮಚ ಹುಣಸೆ ಹಣ್ಣಿನ ರಸ
1/2 ಚಮಚ ಬೆಲ್ಲ

ಮಾಡುವ ವಿದಾನ:

ಮೂಲಂಗಿ ತೊಳೆದು ಕತ್ತರಿಸಿ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಹುರಿದು ತೆಗೆದಿಡಿ. ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಕತ್ತರಿಸಿ ಇಟ್ಟುಕೊಳ್ಳಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಸೇರಿಸಿ ಸ್ವಲ್ಪ ಜೀರಿಗೆ, ಎಳ್ಳು, ಗುರೆಳ್ಳು, ಬೆಳ್ಳುಳ್ಳಿ ಎಸಳು, ಕತ್ತರಿಸಿದ ಹಸಿ ಮೆಣಸಿನಕಾಯಿ, ಈರುಳ್ಳಿ, ಒಣ ಕೊಬ್ಬರಿ ತುರಿ ಹಾಕಿ ಹುರಿಯಿರಿ. ತಣ್ಣಗಾದ ಮೇಲೆ ಮಿಕ್ಸರ್ ನಲ್ಲಿ ಸ್ವಲ್ಪ ಒರಟಾಗಿ ರುಬ್ಬಿ ಇಟ್ಟುಕೊಳ್ಳಿ.

ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸಿನಕಾಯಿ ಮುರಿದು ಹಾಕಿ ಹುರಿಯಿರಿ. ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಹುರಿದು ನಂತರ ಹುರಿದ ಮೂಲಂಗಿ ಸೇರಿಸಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಉಪ್ಪು, ಅರಿಶಿಣ ಮತ್ತು ಹುಣಸೆ ರಸ ಬೆಲ್ಲ ಸೇರಿಸಿ ಕೈಯಾಡಿಸಿ. ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮೇಲೆ ಹಾಕಿ. ಈಗ ಮೂಲಂಗಿ ಕಾಯಿ ಪಲ್ಯ ಸವಿಯಲು ಸಿದ್ದ. ಜೋಳದ ರೊಟ್ಟಿಯ ಜೊತೆ ಈ ಮೂಲಂಗಿ ಕಾಯಿ ಪಲ್ಯ ಸವಿದು ನೋಡಿ.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: