ಕವಿತೆ: ಮಲ್ಲಿ ಕಟ್ಟಿದ ಹಾರ

.

 

ನಲ್ಲೆ ತಾನು
ಮಲ್ಲೆ ಕಟ್ಟಿ
ಬಿಲ್ಲೆ ಕೂಡಿಯಿಟ್ಟಳು
ಸೊಲ್ಲಿನಲ್ಲಿ
ಮಲ್ಲಿಯಿಂದು
ಮಲ್ಲೆ ಮಾರಿ ಹೋದಳು

ಸರಳವಾಗಿ
ಮರುಳುಮಾಡಿ
ಹೆರಳು ತೀಡಿ ಪೋಪಳು
ಕರುಳು ಕಲ್ಲು
ಕರಗುವಂತೆ
ಬೆರಗು ಮಾತನಾಳ್ಪಳು

ಲೆಕ್ಕದಲ್ಲಿ
ಚೊಕ್ಕಳಿವಳು
ಪಕ್ಕ ಹಳ್ಳಿ ಮುಗ್ದಳು
ರೊಕ್ಕವೆಣಿಸಿ
ಪಕ್ಕದಲ್ಲಿ
ಚೊಕ್ಕವಾಗಿಯಿಟ್ಟಳು

ಹಳ್ಳಿಯಲ್ಲಿ
ಬೆಳ್ಳಿಯಾಗಿ
ಮಳ್ಳಿಯಂತೆ ಕಾಂಬಳು
ಬಳ್ಳಿ ನಡುವ
ಕುಳ್ಳಿಯಿವಳು
ಸುಳ್ಳು ಹೇಳಲಾರಳು

ಬಿಂಕ ತೋರಿ
ಸುಂಕ ಕೊಡದೆ
ಕೊಂಕು ಮಾತು ನುಡಿವಳು
ಅಂಕೆಯಲ್ಲಿ
ಶಂಕೆಯಿರದೆ
ರಂಕಳಾಗಿರುವಳು ತಾ

(ಚಿತ್ರ ಸೆಲೆ: wallpaperflare.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: