ಜೂನ್ 23, 2020

ವಚನಗಳು, Vachanas

ಶಣ್ಮುಕಸ್ವಾಮಿಯ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಸತ್ಯವಚನವ ನುಡಿಯಬಲ್ಲರೆ ಶರಣನೆಂಬೆನು ಸದಾಚಾರದಲ್ಲಿ ನಡೆಯಬಲ್ಲರೆ ಶರಣನೆಂಬೆನು. (443/1058) ಸತ್ಯ=ದಿಟ/ನಿಜ/ವಾಸ್ತವ; ವಚನ=ಮಾತು; ಸತ್ಯವಚನ=ವಾಸ್ತವದ ಸಂಗತಿಯನ್ನು ಹೇಳುವ ಮಾತು; ನುಡಿ=ಹೇಳು; ಬಲ್=ತಿಳಿ/ಅರಿ; ನುಡಿಯಬಲ್ಲರೆ=ಹೇಳಬಲ್ಲವರಾದರೆ/ನುಡಿಯಲು ಅರಿತಿದ್ದರೆ; ಶರಣನ್+ಎಂಬೆನು; ಶರಣ=ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ತಿಳಿದು...