ಗಜ್ಜರಿ ಮಿಲ್ಕ್ ಶೇಕ್
– ಸವಿತಾ.
ಬೇಕಾಗುವ ಸಾಮಾನುಗಳು
- ಗಜ್ಜರಿ – 1
- ಹಾಲು –2 ಲೋಟ
- ಏಲಕ್ಕಿ – 1
- ಗೋಡಂಬಿ – 2
- ಸಕ್ಕರೆ – 4 ಚಮಚ
ಮಾಡುವ ಬಗೆ
ಗಜ್ಜರಿಯನ್ನು (ಕ್ಯಾರೇಟ್) ಒಂದು ಕುದಿ ಕುದಿಸಿ ಇಳಿಸಬೇಕು. ಆರಿದ ನಂತರ ಮಿಕ್ಸರ್ನಲ್ಲಿ ಗಜ್ಜರಿ, ಸಕ್ಕರೆ, ಗೋಡಂಬಿ ಏಲಕ್ಕಿ ಜೊತೆ ಸೇರಿಸಿ ನುಣ್ಣಗೆ ರುಬ್ಬಿ ನಂತರ ಕಾಯಿಸಿ ಆರಿಸಿದ ಹಾಲನ್ನು ಸೇರಿಸಿ ಚೆನ್ನಾಗಿ ತಿರುಗಿಸಬೇಕು. ಈಗ ಗಜ್ಜರಿ ಮಿಲ್ಕ್ ಶೇಕ್ ಸವಿಯಲು ಸಿದ್ದ. ಇದನ್ನು ಪ್ರಿಡ್ಜ್ ನಲ್ಲಿಟ್ಟು ತಣ್ಣಗೆ ಮಾಡಿ ಕುಡಿಯಬಹುದು ಅತವಾ ಐಸ್ ಕ್ಯೂಬ್ ಹಾಕಿಕೊಂಡು ಕೂಡ ಕುಡಿಯಬಹುದು.
ಇತ್ತೀಚಿನ ಅನಿಸಿಕೆಗಳು