ಕವಿತೆ: ಹದ್ದುಮೀರಿದೆ

– .

ತಲ್ಲಣಿಸುತಲಿಹುದೀಗ ಜಗ
ಮತ್ತೆ ಮೊದಲಿನ ಹಾಗೆ
ಮೆಲ್ಲುಲಿಯ ಮತದ ಶ್ರೇಶ್ಟತೆಯ
ಸತ್ತೆಗಡಿಗಲ್ಲು ನೆಡಲಾಗಿ

ಮದ್ದುಗುಂಡುಗಳ ಉದ್ಯಮವೀಗ
ಬಾರೀ ಮುನ್ನೆಲೆಗಿಹುದು
ಮಾನವಿಕ ಪ್ರೀತಿ ಪ್ರೇಮದ ತತ್ವಕೆ
ಮಸಣದಾ ಹಾದಿ ತೆರೆದು

ವಿಶ್ವ ದಾರ‍್ಶನಿಕರ ಸೊಲ್ಲುಗಳೀಗ
ಬರಿಯ ಪುಸ್ತಕದ ಜೊಲ್ಲು
ಪ್ರಸಾದವಾಗಲೇ ಇಲ್ಲ ನವ ದಿನಕೆ
ಹೊಸ ನೀತಿ ಕತ್ತಿ ತೂಗಲು

ಹದ್ದು ಮೀರಿದವರ ಜುಟ್ಟು ಹಿಡಿವ
ಮಲ್ಲ ನಿದ್ರೆ ಮಾಡುತಿಹನು
ಅವನ ಕತ್ತಿಗೀಗ ಕುತ್ತು ಬಂದಿಹುದು
ಬರೆದ ಅಕ್ಶರವೆ ಉರುಳೇನು

(ಚಿತ್ರ ಸೆಲೆ: mac6.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: