ಕವಿತೆ : ಮೋಹ ಪತಂಗ

ವಿನು ರವಿ.

ಒಲವು, ಹ್ರುದಯ, heart, love

ಯಾವುದೀ ಮಾಯೆಯೊ
ಯಾವುದೀ ಒಲುಮೆಯೊ
ಯಾವುದೋ ಬ್ರಮೆಯಲಿ
ಸಿಲುಕಿಯೂ ಸಿಲುಕದೆ
ಹಾರುತಿದೆ ಮೋಹ ಪತಂಗ

ಅದೇನೊ ಬಂದವೊ
ಅದಾವ ರಾಗವೊ
ಮಿತಿಯಿರದ ಬಯಕೆ
ಗೊಲಿದು ಒಲಿಯದೆ
ಹಾರುತಿದೆ ಮೋಹ ಪತಂಗ

ಅದಾವ ದಾರಿಯೋ
ಅದಾರ ನೇಹವೊ
ಕಾಣದ ಸೆಳೆತದಲಿ
ಸಿಲುಕಿಯೂ ಸಿಲುಕದೆ
ಹಾರುತಿದೆ ಮೋಹ ಪತಂಗ

ಬಿಡಿಸಲಾಗದೊಲುಮೆ ಚೆಂದ
ಬಿಡಿಸಿಕೊಳ್ಳಲೆಣಿಸುತಾ ಬಂದ
ಬಿಡಿಸಲಾರದೆ ಬಳಲುತಾ
ಹಾರುತಿದೆ ಮೋಹ ಪತಂಗ

(ಚಿತ್ರ ಸೆಲೆ: healingwithdrcraig.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. chandrakanth patil says:

    ಬಿಡಿಸಲಾಗದೋಲುಮೆ ಚೆಂದ

ಅನಿಸಿಕೆ ಬರೆಯಿರಿ: