ಸಿಹಿ ಕುಂಬಳಕಾಯಿ ಕಡುಬು
– ಕಲ್ಪನಾ ಹೆಗಡೆ.
ಬೇಕಾಗುವ ಸಾಮಾನುಗಳು
- ಸಿಹಿ ಕುಂಬಳಕಾಯಿ – 1
- ಅಕ್ಕಿ – 2 ಪಾವು
- ಬೆಲ್ಲ – 2 ಕಪ್
- ಕಾಯಿತುರಿ – 2 ಕಪ್
- ಏಲಕ್ಕಿ – 3
- ಬಾಳೆ ಎಲೆ
ಮಾಡುವ ಬಗೆ
ಮೊದಲು ಸಿಹಿ ಕುಂಬಳಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಅಕ್ಕಿಯನ್ನು 2 ಗಂಟೆಗಳ ಕಾಲ ನೆನಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಒಂದು ಬಾಣಲೆಗೆ ಹೆಚ್ಚಿದ ಕುಂಬಳಕಾಯಿ ಹಾಗೂ ರುಬ್ಬಿದ ಅಕ್ಕಿ ಹಿಟ್ಟನ್ನು ಹಾಕಿ ಬೆಲ್ಲ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಹಿಟ್ಟು ಗಟ್ಟಿ ಆಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಕಾಯಿತುರಿಗೆ ಸ್ವಲ್ಪ ಬೆಲ್ಲ, ಏಲಕ್ಕಿ ಪುಡಿ ಹಾಕಿ ಕಲಸಿಕೊಳ್ಳಿ.
ಬಾಳೆ ಎಲೆ ಮೇಲೆ ಕಲಸಿದ ಹಿಟ್ಟನ್ನು ಹಾಕಿ ಕೈಗೆ ಸ್ವಲ್ಪ ನೀರನ್ನು ಅದ್ದಿಕೊಂಡು ತೆಳ್ಳಗೆ ತಟ್ಟಬೇಕು. ಅದರ ಮೇಲೆ ತಯಾರಿಸಿದ ಬೆಲ್ಲ ಸೇರಿಸಿದ ಕಾಯಿತುರಿಯನ್ನು ಸವರಬೇಕು. ಕಡುಬಿನ ದಳ್ಳೆಗೆ ನೀರನ್ನು ಹಾಕಿ ಅದರ ಮೇಲೆ ಅದರ ತಾಳೆ ಎಲೆಯನ್ನು ಇಟ್ಟು ಅದರ ಮೇಲೆ ಬಾಳೆ ಎಲೆಯನ್ನು ಮಡಚಿ ಇಡಬೇಕು. 20 ನಿಮಿಶ ಬಿಡಬೇಕು. ಕಡುಬಿನ ದಳ್ಳೆ ಇಲ್ಲದಿದ್ದರೆ, ಕುಕ್ಕರಿನ ತಳಬಾಗದಲ್ಲಿ ನೀರನ್ನು ಹಾಕಿ ಇಡ್ಲಿ ತಟ್ಟೆಯಲ್ಲಿ ಇಟ್ಟು ಬೇಯಿಸಿಕೊಳ್ಳಬೇಕು. ಬೆಂದ ನಂತರ ಬಾಳೆ ಎಲೆಯನ್ನು ಬಿಡಿಸಿ, ಸ್ವಲ್ಪ ತುಪ್ಪ ಸವರಿದರೆ ಸಿಹಿ ಕುಂಬಳಕಾಯಿ ಕಡುಬು ಸವಿಯಲು ತಯಾರು.
ತುಂಬಾ ಸುಲಭವಾಗಿ ಮಾಡಬಹುದಾದ ಸಿಹಿ ಭಕ್ಷ್ಯ. ಚಂದದ ವಿವರಣೆ