ಕವಿತೆ: ಮಳೆ ನಿಂತಂತಿದೆ…

– ವಿನು ರವಿ.

ಮಳೆ ನಿಂತಂತಿದೆ…

ಬಿಸಿಲಿಗೂ ಒಂದಿಶ್ಟು
ಜಾಗ ಮಾಡಿಕೊಡಲು
ಮೋಡಗಳು ಬಾನಂಗಳದಿಂದ
ಸರಿದು ಹೋದಂತಿದೆ

ಗಿಡಮರಗಳಿಂದ ತೊಟ್ಟಿಕ್ಕುವ
ಹನಿಹನಿಯು
ಬೆಚ್ಚಗಾಗಲು ತವಕಿಸಿದಂತಿದೆ

ಸಮೀರನ ಶೀತಲತೆಗೆ
ಸೊರಗಿ ಹೋಗಿದ್ದ
ಸುಮ ಸುಂದರಿಯರು
ಮುಗುಳು ನಗಲು
ಕಾತರಿಸಿದಂತಿದೆ

ಗೂಡೊಳಗೆ ಮುದುರಿದ್ದ
ಮರಿಗುಬ್ಬಿಗಳು
ರೆಕ್ಕೆ ಬಿಚ್ಚಲು ಕುಣಿದಂತಿದೆ

ನೇಸರನ ನಲುಮೆಯ
ನೇವರಿಕೆಗೆ
ಇಳೆಯರಸಿ ಕಾದಂತಿದೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: