ಕವಿತೆ: ಮುಳ್ಳುಗಳು

– ಕಾಂತರಾಜು ಕನಕಪುರ.

 

ಹೂಗಿಡದಲ್ಲಿ
ಮುಳ್ಳುಗಳೇಕೆ?
ನೋಡಲು ರಮ್ಯವಲ್ಲ
ಮ್ರುದುತನದ ಕುರುಹಿಲ್ಲ
ನವಿರುತನದ ಪರಿಚಯವಿಲ್ಲ
ಅವು ಕ್ರೂರತೆಯ ಪ್ರತಿನಿದಿಗಳು

ಸುಮ ಸೌಂದರ‍್ಯಕೆ
ರಮ್ಯರಮಣೀಯತೆಗೆ
ಅವುಗಳಿಂದಲೇ ಕಂಟಕ
ಹೀಗಾಗಿ
ಮುಳ್ಳುಗಳೆಲ್ಲವನ್ನು
ತೆರವುಗೊಳಿಸಲಾಯಿತು

ಗಳಿಗೆಯೊಳಗೆ
ಎಲ್ಲಾ ಹೂಗಳನ್ನು
ದೋಚಲಾಗಿತ್ತು

(ಚಿತ್ರಸೆಲೆ: unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: