ಕವಿತೆ : ಕಶ್ಟಗಳ ನಿವಾರಿಸುವ ಗಣಪ

ಶಿವಮೂರ‍್ತಿ. ಹೆಚ್. ದಾವಣಗೆರೆ.

ganesha

ಶಿವ ಪಾರ‍್ವತಿ ತನಯ
ಶಿವ ಗಣಗಳ ಒಡೆಯ

ತ್ರಿಲೋಕ ಪ್ರತಮ ಪೂಜಿತ
ತ್ರಿಮೂರ‍್ತಿ ಪ್ರಬೆಯ ಶೋಬಿತ

ಚತುರ‍್ವೇದ ವಂದಿತ
ಚತುರ‍್ಬುಜ ಹೊಂದಿತ

ವಿಗ್ನಗಳ ನಿವಾರಕ ವಿಗ್ನೇಶ
ಗರಿಕೆಯ ಪೂಜಿಪ ಗಣೇಶ

ವೇದವ್ಯಾಸರ ಶಿಶ್ಯನು
ಮಹಾಬಾರತ ಲಿಪಿಕಾರನು

ಮೂಶಿಕ ವಾಹನನು
ಮೋದಕ ಪ್ರಿಯನು

ಗಜವದನನೇ ಹೇರಂಬ
ವಿದ್ಯೆಗೆ ನೀನೇ ಆರಂಬ

ಕ್ರಿಶ್ಣನ ಲೋಕನಿಂದೆ ಪರಿಹರಿಪ
ಕಶ್ಟಗಳ ನಿವಾರಿಸುವ ಗಣಪ

( ಚಿತ್ರಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications