ಮಸಾಲೆ ಅನ್ನ

– ಸವಿತಾ.

ಬೇಕಾಗುವ ಪದಾರ‍್ತಗಳು

  • ಏಲಕ್ಕಿ – 1
  • ಈರುಳ್ಳಿ – 1
  • ಲವಂಗ – 4
  • ಕ್ಯಾರೇಟ್ – 1/2
  • ಅಕ್ಕಿ – 1 ಲೋಟ
  • ಚಕ್ಕೆ – 1/4 ಇಂಚು
  • ಟೊಮೋಟೊ – 1
  • ಜೀರಿಗೆ – 1/4 ಚಮಚ
  • ಇಂಗು – 1/4 ಚಮಚ
  • ಸಾಸಿವೆ – 1/4 ಚಮಚ
  • ಬೆಳ್ಳುಳ್ಳಿ – ಒಂದು ಗಡ್ಡೆ
  • ಹಸಿ ಮೆಣಸಿನಕಾಯಿ – 2
  • ಹಸಿ ಶುಂಟಿ – 1/4 ಇಂಚು
  • ಅರಿಶಿಣ ಪುಡಿ – 1/4 ಚಮಚ
  • ಕೊತ್ತಂಬರಿ ಪುಡಿ – 1 ಚಮಚ
  • ಒಣ ಕಾರದ ಪುಡಿ – 1 ಚಮಚ
  • ಎಣ್ಣೆ ಅತವಾ ತುಪ್ಪ – 4 ಚಮಚ
  • ಗರಮ್ ಮಸಾಲೆ ಪುಡಿ – 1 ಚಮಚ
  • ಉಪ್ಪು ರುಚಿಗೆ ತಕ್ಕಶ್ಟು
  • ಕರಿಬೇವು ಸ್ವಲ್ಪ
  • ಕೊತ್ತಂಬರಿ ಸೊಪ್ಪು ಸ್ವಲ್ಪ
  • ಉಳಿದ ತರಕಾರಿ ಇದ್ದದ್ದು ಬೀನ್ಸ್ , ಹೂಕೋಸು , ಇತ್ಯಾದಿ. (ಬಟಾಣಿ ಇದ್ದರೇ)

ಮಾಡುವ ಬಗೆ

ಅಕ್ಕಿ ತೊಳೆದು ನೀರು ಸೇರಿಸಿ ಅನ್ನ ಮಾಡಿಟ್ಟುಕೊಳ್ಳಿ. ಈರುಳ್ಳಿ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಟೊಮೋಟೊ ಮತ್ತು ಹಸಿ ಮೆಣಸಿನಕಾಯಿ ಕತ್ತರಿಸಿ ಇಟ್ಟುಕೊಳ್ಳಿ. ಕ್ಯಾರೇಟ್ ಸಣ್ಣದಾಗಿ ಕತ್ತರಿಸಿ ಅತವಾ ತುರಿದು ಇಟ್ಟುಕೊಳ್ಳಿ. ಉಳಿದ ತರಕಾರಿ ಸಣ್ಣದಾಗಿ ಕತ್ತರಿಸಿ ಹಾಕಿ (ಇದು ನಿಮ್ಮ ಅಯ್ಕೆಗೆ ಬಿಟ್ಟದ್ದು). ಕೊತ್ತಂಬರಿ ಸೊಪ್ಪು ಕತ್ತರಿಸಿ ಇಟ್ಟುಕೊಳ್ಳಿ. ಶುಂಟಿ ಬೆಳ್ಳುಳ್ಳಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ. ಏಲಕ್ಕಿ ಲವಂಗ ಮತ್ತು ಚಕ್ಕೆ ಪುಡಿ ಮಾಡಿ ಇಟ್ಟುಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಸಾಸಿವೆ ಜೀರಿಗೆ ಕರಿಬೇವು ಇಂಗು ಹಾಕಿ ಹುರಿಯಿರಿ. ಶುಂಟಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ ನಂತರ ಈರುಳ್ಳಿ ಹಾಕಿ. ನಂತರ ಟೊಮೋಟೊ ಮತ್ತು ಕ್ಯಾರೇಟ್ ಹಾಕಿ ಮತ್ತು ನಿಮ್ಮ ಇಶ್ಟದ ತರಕಾರಿ ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ಉಪ್ಪು, ಅರಿಶಿಣ ಮತ್ತು ಒಣ ಕಾರದ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ಕೊತ್ತಂಬರಿ ಪುಡಿ, ಗರಮ್ ಮಸಾಲೆ ಪುಡಿ, ಏಲಕ್ಕಿ, ಲವಂಗ ಮತ್ತು ಚಕ್ಕೆ ಪುಡಿ ಹಾಕಿ ಚೆನ್ನಾಗಿ ಹುರಿದು ಒಲೆ ಆರಿಸಿ. ಮಾಡಿಟ್ಟ ಅನ್ನ ಒಗ್ಗರಣೆ ಚೆನ್ನಾಗಿ ಕಲಸಿ ಇನ್ನೊಮ್ಮೆ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಉದುರಿಸಿ ತಟ್ಟೆಗೆ ಹಾಕಿದರೆ ರುಚಿಯಾದ ಮಸಾಲೆ ಅನ್ನ ಸವಿಯಲು ಸಿದ್ದ. ತುಂಬಾ ಸರಳ ವಾದ ಮಸಾಲೆ ರೈಸ್ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: