ಕವಿತೆ: ಜೀವನ ಪಯಣ
ಜನನದೂರಿಂದ ಮರಣದೂರಿಗೆ
ಜೀವನ ಪಯಣ ಗಾಡಿ ಹೊರಟಿದೆ
ನೆನಪುಗಳ ಮೂಟೆ ಹೊತ್ತುಕೊಂಡು
ನಲಿವು ನೋವಿನ ಹಳ್ಳ ದಿಣ್ಣೆ ದಾಟಿದೆ
ಬಗವಂತನೇ ಚಾಲಕ ನಿರ‍್ವಾಹಕನಾಗಿ
ಸಾಗುವೂರಿಗೆ ಚೀಟಿಯ ನೀಡಿರುವನು
ಬಂದು ಬಳಗದ ನಿಲ್ದಾಣಗಳಲ್ಲಿ ನಿಂತು
ಸಂಬಂದಿಕರ ಹತ್ತಿಸಿಕೊಂಡು ಇಳಿಸಿದನು
ಬಾಳ ತಿರುವಿನ ಗಟ್ಟಗಳಲ್ಲಿ ತಿರುಗಾಡಿಸಿ
ರಸಮಯ ಕ್ಶಣಗಳ ಮೆಲುಕು ಹಾಕಿಸಿದನು
ಬಾಳ ಕಾನಾವಳಿಯಲ್ಲಿ ಊಟ ಮಾಡಿಸಿ
ಬಾಳೆಲೆಯಂಗೆ ಬಾಳಿದೆಯೆಂದು ತಿಳಿಸಿದನು
ಜನನಿ ಗರ‍್ಬದ ಪ್ರತಮ ನಿಲ್ದಾಣದಿಂದ
ಅವನಿ ಗರ‍್ಬದ ಅಂತಿಮ ನಿಲ್ದಾಣವೆಂದನು
ನಾವರಿತುಕೊಂಡು ಹೋಗೋಣವೆಂದ
ಶಿವ ಸಾನ್ನಿದ್ಯವ ಪಡೆಯೋಣವೆಂದನು
(ಚಿತ್ರ ಸೆಲೆ: geeflix.com)
ಇತ್ತೀಚಿನ ಅನಿಸಿಕೆಗಳು