ಕವಿತೆ : ಸುಳ್ಳಿನ ಸೂರನು ಕಟ್ಟುತಲಿರಲು

ಶ್ಯಾಮಲಶ್ರೀ.ಕೆ.ಎಸ್.

meditation

ಸುಳ್ಳಿನ ಸೂರನು ಕಟ್ಟುತಲಿರಲು
ಸತ್ಯದ ಸಿಡಿಲು ಬಡಿಯುವುದು

ಅನೀತಿಯು ಆಟವ ಆಡುತಲಿರಲು
ದರ‍್ಮದ ಜಯವು ಮೊಳಗುವುದು

ದುರಾಸೆಯ ತೆಪ್ಪವು ತೇಲುತಲಿರಲು
ನಿರಾಸೆಯ ಅಲೆಯು ಅಪ್ಪಳಿಸುವುದು

ಅನ್ಯರ ಒಳಿತಿಗೆ ಹುಳಿ ಹಿಂಡುತಲಿರಲು
ಕರ‍್ಮದ ಕಹಿ ಬೆನ್ನೇರುವುದು

ಒಳ್ಳೆಯತನವು ಕತ್ತಲೆಯಲಿ ನಿದ್ರಿಸುತಲಿರಲು
ಜ್ನಾನದ ಬೆಳಕು ಎಚ್ಚರಿಸುವುದು

( ಚಿತ್ರಸೆಲೆ : deccanchronicle.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks