ಪಪ್ಪಾಯಿ ಹಣ್ಣಿನ ಬರ‍್ಪಿ

– ಸವಿತಾ.

ಬೇಕಾಗುವ ಸಾಮಾನುಗಳು

ಪಪ್ಪಾಯಿ ಹಣ್ಣಿನ ಹೋಳು – 2 ಬಟ್ಟಲು
ತೆಂಗಿನ ಕಾಯಿ ತುರಿ – 1 ಬಟ್ಟಲು
ಬೆಲ್ಲದ ಪುಡಿ ಅತವಾ ಸಕ್ಕರೆ – 1.5 ಬಟ್ಟಲು
ತುಪ್ಪ – 4-5 ಚಮಚ
ಏಲಕ್ಕಿ ಪುಡಿ – 2
ಗೋಡಂಬಿ – 8
ಬಾದಾಮಿ – 4
ಒಣ ದ್ರಾಕ್ಶಿ – 10
ಅಕ್ಕಿ ಹಿಟ್ಟು – 2 ಚಮಚ

ಮಾಡುವ ಬಗೆ

ಪಪ್ಪಾಯಿ ಹಣ್ಣಿನ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ ಒಂದು ಸುತ್ತು ಮಿಕ್ಸರ್ ನಲ್ಲಿ ತಿರುಗಿಸಿ ತೆಗೆದು ಇಟ್ಟುಕೊಳ್ಳಿ. ಕೊಬ್ಬರಿ ತುರಿ ತುರಿದು ಇಟ್ಟುಕೊಳ್ಳಿ. ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಕತ್ತರಿಸಿದ ಗೋಡಂಬಿ, ಬಾದಾಮಿ, ಒಣ ದ್ರಾಕ್ಶಿ ಬೇರೆ ಬೇರೆಯಾಗಿ ಹುರಿದು ತೆಗೆಯಿರಿ.

ಅದೇ ಬಾಣಲೆಗೆ ಇನ್ನೊಂದು ಚಮಚ ತುಪ್ಪ ಹಾಕಿ ಅಕ್ಕಿ ಹಿಟ್ಟು ಹುರಿದು ತೆಗೆಯಿರಿ. ಮತ್ತೆ ಇನ್ನೊಂದು ಚಮಚ ತುಪ್ಪ ಹಾಕಿ ಪಪ್ಪಾಯಿ ಹಣ್ಣಿನ ಪಲ್ಪ್ ಮತ್ತು ಹಸಿ ಕೊಬ್ಬರಿ ತುರಿ ಚೆನ್ನಾಗಿ ಹುರಿಯಿರಿ. ನಂತರ ಸಕ್ಕರೆ , ಹುರಿದ ಅಕ್ಕಿ ಹಿಟ್ಟು , ಹುರಿದ ಗೋಡಂಬಿ, ಬಾದಾಮಿ, ಒಣ ದ್ರಾಕ್ಶಿ ಸೇರಿಸಿ ಚೆನ್ನಾಗಿ ಕುದಿಸಿ ಇಳಿಸಿ. ಚಕ್ಕಲಿ ಹಾಗೆ ಕತ್ತರಿಸಲು ಬರುವಂತೆ ಗಟ್ಟಿಯಾದ ಮೇಲೆ ಒಲೆ ಆರಿಸಿ. ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ತಿರುಗಿಸಿ. ಒಂದು ತಟ್ಟೆಗೆ ತುಪ್ಪ ಸವರಿ ಮಿಶ್ರಣ ಹಾಕಿಕೊಂಡು ಬರ‍್ಪಿ ತರಹ ಕತ್ತರಿಸಿ. ಈಗ ಪಪ್ಪಾಯಿ ಹಣ್ಣಿನ ಬರ‍್ಪಿ ಸವಿಯಲು ಸಿದ್ದ .

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: