ಕವಿತೆ: ನಮ್ಮ ಶಾಲೆ

– ಶ್ಯಾಮಲಶ್ರೀ.ಕೆ.ಎಸ್.

ಸರಕಾರಿ ಸ್ಕೂಲು, Govt School

ನಮ್ಮ ಶಾಲೆ ಇದು ನಮ್ಮ ಶಾಲೆ
ಅಕ್ಶರಾಮ್ರುತವ ಉಣ ಬಡಿಸಿ
ಅರಿವಿನ ಹಣತೆಯ ಹೊತ್ತಿಸಿ
ತತ್ವ ಸಾರವ ಬೋದಿಸಿದ ದಿವ್ಯ ಮಂದಿರವೀ
ನಮ್ಮ ಶಾಲೆ,ಇದು ನಮ್ಮಪಾಟಶಾಲೆ

ಗುರುಗಳೆಂಬ ಜ್ನಾನ ಯೋಗಿಗಳು
ವಿದ್ಯೆಯೆಂಬ ದೀವಿಗೆಯ ಬೆಳಗಿಸಿ
ಗುರಿಸಾದನೆಯ ದಾರಿ ತೋರಿಸಿ
ಅಜ್ನಾನದಿಂದ ಸುಜ್ನಾನದೆಡೆಗೆ ಕರೆದೊಯ್ದ ಗುರುಕುಲವೀ
ನಮ್ಮ ಶಾಲೆ, ಇದು ನಮ್ಮ ಪಾಟಶಾಲೆ

ಎಳವೆಯಲ್ಲಿ ಗೆಳೆಯರೊಡಗೂಡಿ
ಹೊತ್ತಿಗೆಯ ಚೀಲವ ಹೊತ್ತೊಯ್ಯುತ
ಓದುತ ಬರೆಯುತ ಪಟಣವ ಮಾಡುತ
ಹಾಸ್ಯ ಹರಟೆಗಳ ತುಂಟತನದಿ ನಲಿದಾಡಿದ ನಂದನವನವೀ
ನಮ್ಮ ಶಾಲೆ, ಇದು ನಮ್ಮ ಪಾಟಶಾಲೆ

ಮರೆತರೂ ಮರೆಯಲಾರೆವು
ಮೊಗ್ಗಿನ ಮನದಲಿ ಅರಳಿದ ಸಿಹಿ ಕನಸುಗಳ
ಮೆಲುಕು ಹಾಕುತ ಸವಿ ಸವಿ ನೆನಪುಗಳ
ಅನುದಿನವು ನೆನೆವ ಆದರ‍್ಶಗಳ ಬಿತ್ತಿದ ಮಾದರಿ ಶಾಲೆ ಈ
ನಮ್ಮ ಶಾಲೆ, ಇದು ನಮ್ಮ ಪಾಟಶಾಲೆ

(ಚಿತ್ರ ಸೆಲೆ:  klp )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Nithesh says:

    Very nice 👌 👍 👏 😀 ☺️ 😊

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *