ಸೋರೆಕಾಯಿ ಹಲ್ವಾ

– ಸವಿತಾ.

ಬೇಕಾಗುವ ಸಾಮಾನುಗಳು

  • ತುರಿದ ಸೋರೆಕಾಯಿ – 2 ಬಟ್ಟಲು
  • ತುಪ್ಪ  – 3/4 (ಮುಕ್ಕಾಲು) ಬಟ್ಟಲು
  • ಬೆಲ್ಲದ ಪುಡಿ – 1 ಬಟ್ಟಲು
  • ಏಲಕ್ಕಿ – 2
  • ಲವಂಗ – 2

(ಬೇಕಾದರೆ ಬಾದಾಮಿ ಚೂರು/ ಗೋಡಂಬಿ ಚೂರು ಹಾಕಬಹುದು)

ಮಾಡುವ ಬಗೆ

ಸೋರೆಕಾಯಿ ಸಿಪ್ಪೆ ತೆಗೆದು ತುರಿದು ಇಟ್ಟುಕೊಳ್ಳಿ. ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ. ಸೋರೆಕಾಯಿ ತುರಿ ಸೇರಿಸಿ ಚೆನ್ನಾಗಿ ಹುರಿಯಿರಿ. ನಡು ನಡುವೆ ತುಪ್ಪ ಹಾಕುತ್ತಾ, ಚೆನ್ನಾಗಿ ಹುರಿದು ನಂತರ ಬೆಲ್ಲ ಸೇರಿಸಿ ಚೆನ್ನಾಗಿ ಕೈಯಾಡಿಸುತ್ತಿರಿ. ಬೆಲ್ಲ ಕರಗಿ ನೀರಾಗಿ ಹೊಂದಿಕೊಂಡು ಗಟ್ಟಿ ಆಗಬೇಕು, ಆಗ ಒಲೆ ಆರಿಸಿ ಇಳಿಸಿ. ಏಲಕ್ಕಿ ಲವಂಗ ಪುಡಿ ಮಾಡಿ ಹಾಕಿ. ಒಂದು ತಟ್ಟೆಗೆ ತುಪ್ಪ ಸವರಿ. ಇನ್ನೊಮ್ಮೆ ಚೆನ್ನಾಗಿ ಕಲಸಿ ತಟ್ಟೆಗೆ ಸುರಿದು ಬೇಕಾದ ಆಕಾರದಲ್ಲಿ ಕತ್ತರಿಸಿ. ಈಗ ಸೋರೆಕಾಯಿ ಹಲ್ವಾ ಸವಿಯಲು ಸಿದ್ದ. ಆರೋಗ್ಯಕ್ಕೆ ಉತ್ತಮವಾದ ಸೋರೆಕಾಯಿ ಹಲ್ವಾ ಮಾಡಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: