ಮಲೆನಾಡ ಬಗೆಯ ಮೀನು ಪ್ರೈ

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

 • ಮೀನು  – 1 ಕಿಲೋ
 • ಅರಿಶಿಣ – 1/2 ಚಮಚ
 • ಬೆಳ್ಳುಳ್ಳಿ – 12 -14 ಎಸಳು
 • ಕಾಳುಮೆಣಸು – 10-12
 • ಉಪ್ಪು – ರುಚಿಗೆ ತಕ್ಕಶ್ಟು
 • ಕಾರದ ಪುಡಿ  – 5-6 ಚಮಚ (ಒಣ ಮೆಣಸು ಬಳಸಬಹುದು)
 • ಶುಂಟಿ – 2 ಇಂಚು
 • ಎಣ್ಣೆ
 • ವಾಟೇ ಹುಳಿ/ಅಡುಳಿ  – ರುಚಿಗೆ ತಕ್ಕಶ್ಟು
 • ಹುಣಸೆ ಹಣ್ಣು – ರುಚಿಗೆ ತಕ್ಕಶ್ಟು
 • ಜೋಳದ ಹಿಟ್ಟು ( Corn Flour ) – ಬೇಕಾದಲ್ಲಿ ಮಾತ್ರ
 • ಅಕ್ಕಿ ಹಿಟ್ಟು – ಬೇಕಾದಲ್ಲಿ ಮಾತ್ರ

ಮಾಡುವ ಬಗೆ:

ಮೊದಲಿಗೆ ಕಾರದ ಪುಡಿ, ಕಾಳು ಮೆಣಸು, ಅರಿಶಿಣ, ವಾಟೇ ಹುಳಿ, ಹುಣಸೆ ಹುಳಿ, ಶುಂಟಿ, ಬೆಳ್ಳುಳ್ಳಿ ಮತ್ತು ರುಚಿಗೆ ತಕ್ಕಶ್ಟು ಉಪ್ಪು ಇವಿಶ್ಟನ್ನೂ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಿರಿ. ಮೀನಿನ ಪ್ರೈ ಗರಿ ಗರಿ ಬೇಕಾದಲ್ಲಿ ಸಲ್ಪ ಜೋಳದ ಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿಕೊಳ್ಳಬಹುದು. ಈಗ ರುಬ್ಬಿಟ್ಟುಕೊಂಡ ಹಿಟ್ಟನ್ನು ತೊಳೆದುಕೊಂಡ ಮೀನಿನ ಹೋಳುಗಳಿಗೆ ಚೆನ್ನಾಗಿ ಹಚ್ಚಿ ಒಂದಿಪ್ಪತ್ತು ನಿಮಿಶ ಹಾಗೆಯೇ ಬಿಡಿ. ಆಮೇಲೆ ಈ ಹೋಳುಗಳನ್ನು ಒಂದು ತವಕ್ಕೆ (Frying pan) ಎಣ್ಣೆ ಹಾಕಿ ಕರಿಯಿರಿ(ಹುರಿದುಕೊಳ್ಳಿ). ಈಗ ಮೀನು ಪ್ರೈ ತಯಾರಿದ್ದು, ಈರುಳ್ಳಿ, ನಿಂಬೆ ಮತ್ತು ಸೌತೇಕಾಯಿಯ ಜೊತೆ ತಿನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: