ಮೂಲಂಗಿ ಪಲ್ಯ
– ಸವಿತಾ.
ಬೇಕಾಗುವ ಸಾಮಾನುಗಳು
ಮೂಲಂಗಿ – 2
ಈರುಳ್ಳಿ – 1
ಹಸಿ ಮೆಣಸಿನಕಾಯಿ – 2
ಹಸಿ ಶುಂಟಿ – 1/4 ಇಂಚು
ಬೆಳ್ಳುಳ್ಳಿ ಎಸಳು – 4
ಎಣ್ಣೆ – 2 ಚಮಚ
ಕರಿ ಬೇವು ಎಲೆ – 10
ಸಾಸಿವೆ – 1/4 ಚಮಚ
ಜೀರಿಗೆ – 1/4 ಚಮಚ
ಇಂಗು – 1/4 ಚಮಚ
ಉದ್ದಿನ ಬೇಳೆ – 1/2 ಚಮಚ
ಕಡಲೇ ಬೇಳೆ – 1/2 ಚಮಚ
ಒಣ ಕಾರದ ಪುಡಿ – 1 ಚಮಚ
ನಿಂಬೆ ಹಣ್ಣು – 1/2 ಹೋಳು
ಉಪ್ಪು – ರುಚಿಗೆ ತಕ್ಕಶ್ಟು
ಅರಿಶಿಣ – ಪುಡಿ ಸ್ವಲ್ಪ
ಬೆಲ್ಲ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ (ಬೇಕಾದರೆ ಹಾಕಬಹುದು )
ಮಾಡುವ ಬಗೆ
ಈರುಳ್ಳಿಯನ್ನು ಸಣ್ಣ ಕತ್ತರಿಸಿ. ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಹಸಿ ಶುಂಟಿ ಅರೆದು ಪೇಸ್ಟ್ ಮಾಡಿ ಇಟ್ಟುಕೊಳ್ಳಿ. ಮೂಲಂಗಿ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ.
ಎಣ್ಣೆ ಬಾಣಲೆಗೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಉದ್ದಿನ ಬೇಳೆ, ಕಡಲೇ ಬೇಳೆ ಹಾಕಿ ಚೆನ್ನಾಗಿ ಹುರಿಯಿರಿ. ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿದು, ನಂತರ ಮೂಲಂಗಿ ಸೇರಿಸಿ. ಉಪ್ಪು, ಅರಿಶಿಣ, ಒಣ ಕಾರದ ಪುಡಿ ಸೇರಿಸಿ ಸ್ವಲ್ಪ ನೀರು ಹಾಕಿ ಒಂದು ಕುದಿ ಕುದಿಸಿ ಇಳಿಸಿ. ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಬೆರೆಸಿ . ಬೇಕಾದರೆ ಬೆಲ್ಲ, ಸ್ವಲ್ಪ ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಬಹುದು.
ಈಗ ಮೂಲಂಗಿ ಪಲ್ಯ ಸವಿಯಲು ಸಿದ್ದ. ಚಪಾತಿ ಇಲ್ಲವೇ ಅನ್ನದ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು