ಕವಿತೆ : ನಾವು ಬಾರತೀಯರು
ನಾವು ಬಾರತೀಯರು
ಎನಿತು ಪುಣ್ಯವಂತರು
ಬರತ ಬೂಮಿಯಲ್ಲಿ ಜನಿಸಿದವರು
ಬಾವೈಕ್ಯತೆಯೇ ನಮ್ಮುಸಿರು
ಬಹುಬಾಶೆಗಳ ಪೊರೆದವರು
ಸಂಸ್ಕ್ರುತಿಯಲ್ಲಿ ಸಿರಿವಂತರು
ಈ ಮಣ್ಣಲಿ ಹುಟ್ಟಿದ ನಾವೇ ದನ್ಯರು
ಹರಿಸಿದರಂದು ನೆತ್ತರು
ಮಹಾಮಹಿಮರು ದೇಶಬಕ್ತರು
ಪರಕೀಯರ ಕುತಂತ್ರದಿ ದಣಿದವರು
ಆದರೂ ಚಲವ ಬಿಡಲೊಲ್ಲರು
ಬಿಡದೇ ಹೋರಾಡಿದರು
ಈ ತಪೋಬೂಮಿಯ ಉಳಿಸಿದರು
ಸ್ವತಂತ್ರ ದೇಶವು ನಮ್ಮದಾಗಿದೆ
ಪರತಂತ್ರದಿಂದ ಮುಕ್ತಿ ದೊರೆತಿದೆ
ಹುತಾತ್ಮರ ಚಾಯೆ ಮನದಲ್ಲಿ ಅಚ್ಚಾಗಿದೆ
ದೇಶಪ್ರೇಮವು ಕಣ ಕಣದಲ್ಲೂ ಬೆರೆತಿದೆ
ದೇಶಾಬಿಮಾನ ಇಮ್ಮಡಿಯಾಗಿದೆ
ದೇಶದ ಕೀರುತಿಯು ಬಾನೆತ್ತರಕ್ಕೆ ಬೆಳೆದಿದೆ
ಕಾಲ ಉರುಳುತಲಿದೆ
ವರುಶ ವರುಶವೂ ಹರುಶದ ಆಚರಣೆ ಜರುಗಿದೆ
ಹೋರಾಟಗಾರರ ನೆನಪು ಮರುಕಳಿಸುತಲಿದೆ
ಎಪ್ಪತ್ತೈದರ ಸ್ವಾತಂತ್ರ್ಯೋತ್ಸವ ಬಂದಿದೆ
ದೇಶದೆಲ್ಲೆಡೆ ಅಮ್ರುತೋತ್ಸವ ಸಂಬ್ರಮಿಸಿದೆ
ಹೆಮ್ಮೆಯ ತ್ರಿವರ‍್ಣ ದ್ವಜ ಹಾರಾಡಿದೆ
ಬಾರತಾಂಬೆಗೆ ಬಕ್ತಿಯ ಜೈಕಾರವು ಮೊಳಗಿದೆ
( ಚಿತ್ರಸೆಲೆ : pixabay.com )
ಇತ್ತೀಚಿನ ಅನಿಸಿಕೆಗಳು