ಮೆಣಸಿನ ಅನ್ನ

– ಸವಿತಾ.

ಬೇಕಾಗುವ ಸಾಮಾನುಗಳು

  • ಅಕ್ಕಿ – 1 ಲೋಟ
  • ಕರಿ ಮೆಣಸಿನ ಕಾಳು – 2 ಚಮಚ
  • ಉದ್ದಿನ ಬೆಳೆ – 2 ಚಮಚ
  • ಒಣ ಕೊಬ್ಬರಿ ತುರಿ – 3 ಚಮಚ
  • ಕರಿ ಬೇವು ಎಲೆ – 20
  • ತುಪ್ಪ – 4 ಚಮಚ
  • ಗೋಡಂಬಿ – 6
  • ಕಡಲೇ ಬೀಜ – 2 ಚಮಚ
  • ಸಾಸಿವೆ – ಅರ‍್ದ ಚಮಚ
  • ಜೀರಿಗೆ – ಅರ‍್ದ ಚಮಚ
  • ಇಂಗು – ಕಾಲು ಚಮಚ
  • ಕಡಲೇ ಬೆಳೆ – ಅರ‍್ದ ಚಮಚ
  • ಒಣ ಮೆಣಸಿನಕಾಯಿ – 2
  • ಒಣ ಕಾರದ ಪುಡಿ – 1 ಚಮಚ
  • ಉಪ್ಪು ರುಚಿಗೆ ತಕ್ಕಶ್ಟು
  • ಅರಿಶಿಣ ಪುಡಿ ಸ್ವಲ್ಪ
  • ನಿಂಬೆ ಹಣ್ಣು – ಅರ‍್ದ
  • ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ಬಗೆ

ಮೊದಲಿಗೆ ಅನ್ನ ಮಾಡಿಟ್ಟುಕೊಳ್ಳಿರಿ. ಒಂದು ಚಮಚ ತುಪ್ಪ ಬಾಣಲೆಗೆ ಹಾಕಿ, ಕರಿ ಮೆಣಸಿನ ಕಾಳು, ಹತ್ತು ಕರಿ ಬೇವಿನ ಎಲೆ, ಉದ್ದಿನ ಬೇಳೆ, ಒಣ ಕೊಬ್ಬರಿ ತುರಿ ಹುರಿದು ಆರಲು ಬಿಡಿ. ನಂತರ ಇದನ್ನು ಮಿಕ್ಸರ್‍‍ನಲ್ಲಿ ಪುಡಿ ಮಾಡಿಟ್ಟುಕೊಳ್ಳಿರಿ. ನಂತರ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಗೋಡಂಬಿ ಮತ್ತು ಕಡಲೇ ಬೀಜ ಹುರಿದು ತೆಗೆದಿಡಿ. ಈಗ ಉಳಿದ ತುಪ್ಪ ಹಾಕಿ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಇಂಗು, ಒಣ ಮೆಣಸಿನ ಕಾಯಿ, ಕರಿ ಬೇವು ಮತ್ತು ಕಡಲೇ ಬೇಳೆ ಹಾಕಿ ಒಗ್ಗರಣೆ ಕೊಡಿ. ಒಣ ಕಾರದ ಪುಡಿ, ಸ್ವಲ್ಪ ಅರಿಶಿಣ ಮತ್ತು ಉಪ್ಪು ಹಾಕಿ ಹುರಿಯಿರಿ. ನಂತರ ರುಬ್ಬಿದ ಮೆಣಸಿನ ಪುಡಿ ಹಾಕಿ ಒಲೆ ಆರಿಸಿ.ಇದಕ್ಕೆ ನಿಂಬೆ ಹಣ್ಣಿನ ರಸ ಸೇರಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ. ಅನ್ನ ಹಾಕಿ ಚೆನ್ನಾಗಿ ಕಲಸಿ. ಈಗ ಹುರಿದಿಟ್ಟ ಗೋಡಂಬಿ, ಕಡಲೇ ಬೀಜ ಹಾಕಿ ಇನ್ನೊಮ್ಮೆ ಕಲಸಿಟ್ಟುಕೊಳ್ಳಿರಿ. ಈಗ ರುಚಿ ರುಚಿಯಾದ ಮೆಣಸಿನ ಅನ್ನ ಸವಿಯಲು ಸಿದ್ದವಾಗಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: