ತಟ್ಟನೆ ಮಾಡಿನೋಡಿ ಟೋಮೋಟೋ ಗೊಜ್ಜು

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಟೋಮೋಟೋ – 6
  • ಈರುಳ್ಳಿ – 1
  • ಸಾಸಿವೆ – ಸ್ವಲ್ಪ
  • ಕರಿಬೇವಿನ ಸೊಪ್ಪು – ಸ್ವಲ್ಪ
  • ಅರಿಶಿಣ – ಅರ‍್ದ ಚಿಕ್ಕ ಚಮಚ
  • ಕಾರದ ಪುಡಿ – 2 ಚಮಚ
  • ಹಸಿ ಮೆಣಸಿನ ಕಾಯಿ – 1
  • ಬೆಳ್ಳುಳ್ಳಿ – 6 ಎಸಳು ( ಜಜ್ಜಿಟ್ಟು ಕೊಳ್ಳಿ)
  • ಎಣ್ಣೆ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೊದಲಿಗೆ ಈರುಳ್ಳಿ, ಮೆಣಸಿನ ಕಾಯಿ ಮತ್ತು ಟೋಮೋಟೋವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿರಿ. ಆಮೇಲೆ ಬೆಳ್ಳುಳ್ಳಿ ಬಿಡಿಸಿ ಜಜ್ಜಿಟ್ಟುಕೊಳ್ಳಿರಿ. ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ, ಕರಿಬೇವು ಮತ್ತು ಬೆಳ್ಳುಳ್ಳಿಯನ್ನು ಹಾಕಿರಿ. ಬೆಳ್ಳುಳ್ಳಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ, ಈರುಳ್ಳಿಯನ್ನು ಹಾಕಿರಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ, ಹೆಚ್ಚಿಟ್ಟುಕೊಂಡ ಟೋಮೋಟೋ ಹಾಕಿಕೊಳ್ಳಿರಿ. ಈಗ ಅರಿಶಿಣ ಮತ್ತು ಉಪ್ಪನ್ನು ಹಾಕಿರಿ. ಟೋಮೋಟೋ ಕರಗಲು ಮೊದಲಾಗುತ್ತದೆ. ಟೋಮೋಟೋ ಚೆನ್ನಾಗಿ ಕರಗಿ ಮೆತ್ತಗಾದಮೇಲೆ, ಕಾರದ ಪುಡಿ ಮತ್ತು ನೀರು ಹಾಕಿರಿ. ಉಪ್ಪು ಮತ್ತು ಕಾರ ನೋಡಿ ಬೇಕಾದಲ್ಲಿ ಹಾಕಿಕೊಳ್ಳಬಹುದು. ಟೋಮೋಟೋ ಚೆನ್ನಾಗಿ ಕರಗಿದ ಮೇಲೆ ಒಲೆ ಆರಿಸಿ. ಈಗ ಟೋಮೋಟೋ ಗೊಜ್ಜು ತಯಾರಿದ್ದು ಅನ್ನದ ಜೊತೆ ಇಲ್ಲವೇ ನೀರು ದೋಸೆ ಜೊತೆ ಸವಿಯಲು ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: