ಹಾಯ್ಕುಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾವು ಹಾಲುಂಡು
ಪ್ರಬುದ್ದರ ನಡುವೆ
ಸತ್ತು ಬಿದ್ದಿದೆ

***

ಬೆತ್ತಲಾಗಿವೆ
ಮರಗಿಡಗಳೆಲ್ಲಾ
ಸತ್ಯ ತೋರಲು

***

ಮುತ್ತಿನಂತಹ
ಮಾತುಗಳು ಈಗೀಗ
ಮಾರಾಟಕ್ಕಿವೆ

***

ಮಾನವತೆಗೆ
ಹೊಸ ಬಣ್ಣ ಹಚ್ಚಿದೆ
ಹುಚ್ಚತನದಿ

***

ಹಣ ಗಳಿಸಿ
ಏನೋ ಮರೆತಾಗಿದೆ
ಬಲ್ಲವರಿಲ್ಲ

***

ಬಂಡೆಯ ಮೇಲೆ
ಬರೆದಿದ್ದ ಹೆಸರು
ಕಾಣೆಯಾಗಿದೆ

***

ಮುಗಿಲೆತ್ತರಕೆ
ಕಟ್ಟಲಾಗಿದೆ ಮನೆ
ಮನವನ್ನಲ್ಲ

***

ಪ್ರತಿಬಾವಂತ
ಮರೆಯಾಗುತ್ತಿದ್ದಾನೆ
ಹಣದ ಹಿಂದೆ

***

ಆ ಸತ್ಯವನ್ನೂ
ಪರೀಕ್ಶಿಸಲಾಗಿದೆ
ಅಸತ್ಯಕ್ಕಾಗಿ

***

ಕೋಟಿ ದೇವರು
ಕಲ್ಲಾಗಿಯೇ ನಿಂತಿವೆ
ಕಣ್ಣೀರಿನಲ್ಲಿ

(ಚಿತ್ರಸೆಲೆ : professionalstudies.educ.queensu.ca)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: