ಹೀಗೊಂದು ಬಗೆಯ ಕೋಳಿ ಮಸಾಲೆ

– ನಿತಿನ್ ಗೌಡ.

chicken

ಬೇಕಾಗುವ ಸಾಮಾನುಗಳು

  • ಚಿಕನ್ – 1 ಕಿಲೋ
  • ಈರುಳ್ಳಿ – 2
  • ಚಕ್ಕೆ – 2 ಕಡ್ಡಿ
  • ಲವಂಗ – 4
  • ಏಲಕ್ಕಿ – 1
  • ಅರಿಶಣ – 1/2 ಚಮಚ
  • ಶುಂಟಿ – 1.5 ಇಂಚು
  • ಹಸಿ‌ ಮೆಣಸಿನ ಕಾಯಿ – 4-5
  • ಕೊತ್ತಂಬರಿ‌ ಸೊಪ್ಪು – 1/2 ಕಟ್ಟು
  • ಬೆಳ್ಳುಳ್ಳಿ – 10 -12 ಎಸಳು
  • ಗೋಡಂಬಿ – 10
  • ಕಾಳುಮೆಣಸು – 10-12
  • ಉಪ್ಪು – ರುಚಿಗೆ ತಕ್ಕಶ್ಟು
  • ಟೊಮೊಟೊ ಪ್ಯೂರಿ/ಗಸಿ – 2-3 ಟೊಮೊಟೊ
  • ದನಿಯಾ – 1 ಚಮಚ
  • ಜೀರಿಗೆ – ಕಾಲು ಚಮಚ
  • ಕಾಯು – ಅರ‍್ದ ಹೊಳಕೆ
  • ತುಪ್ಪ/ಎಣ್ಣೆ –  8-10 ಚಮಚ

ಮಾಡುವ ಬಗೆ

ಮೊದಲಿಗೆ ಒಂದು ಬಾಂಡಲಿಯಲ್ಲಿ ಸ್ವಲ್ಪ ತುಪ್ಪ/ಎಣ್ಣೆ ಹಾಕಿ 2 ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ನಡು ಉರಿಯಲ್ಲಿ ಬಾಡಿಸಲು ಇಡಿ. ಈಗ ಈ ಹೊತ್ತಿನಲ್ಲಿ ಕಾಯಿತುರಿ, ಹಸಿಮೆಣಸಿನಕಾಯಿ, ಚಕ್ಕೆ, ಲವಂಗ, ಕಾಳಮೆಣಸು, ಏಲಕ್ಕಿ, ಕೊತ್ತಂಬರಿ ಸೊಪ್ಪು (ಚಿಕ್ಕದಾಗಿ ಕತ್ತರಿಸಿಕೊಂಡಿರಬೇಕು), ಜೀರಿಗೆ, ಮೆಂತೆ, ಹಾಕಿ ನುಣ್ಣಗೆ ರುಬ್ಬಿಕೊಳ್ಳಿರಿ. ಹೀಗೆ ಹುರಿದುಕೊಂಡ ಮೇಲೆ, ಒಂದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈ ಗಸಿ ದಪ್ಪಗೆ ಬೇಕಾದಲ್ಲಿ ನೀರು ಕಡಿಮೆ ಹಾಕಿ.

ಈಗ ಚಿಕನ್ ತೊಳೆದು ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಕಲಸಿಕೊಳ್ಳಿರಿ. ಈಗ ನಡುಉರಿಯಲ್ಲಿ ಬಾಡುತ್ತಿರುವ ಈರುಳ್ಳಿಗೆ ಶುಂಟಿ, ಬೆಳ್ಳುಳ್ಳಿ ಪೇಶ್ಟ್ ಹಾಕಿ ಹಸಿ ಗಮ ಹೋಗುವವರೆಗೆ ಬಾಡಿಸಿ. ಈಗ ಇದಕ್ಕೆ ಸ್ವಲ್ಪ ಅರಿಶಿಣ ಮತ್ತು ಕಾರದ ಪುಡಿ ಹಾಕಿ ಅಲ್ಲಾಡಿಸಿ. ಈಗ ಇದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ ಮತ್ತು ಟೋಮೋಟೋ ಪ್ಯೂರಿ ಹಾಕಿ, ಚೆನ್ನಾಗಿ ಕಲಸಿ ಐದು ನಿಮಿಶ ಕಾಯಿಸಿರಿ. ಈಗ ಒಂದು ಪೇಶ್ಟ್ ಮಾದರಿ ಆಗುತ್ತದೆ. ಈಗ ಇದಕ್ಕೆ ತೊಳೆದಿಟ್ಟ ಕೋಳಿ ತುಂಡುಗಳನ್ನು ಹಾಕಿ, ಬೇಕಾದಲ್ಲಿ ಸ್ವಲ್ಪ ಉಪ್ಪು ಹಾಕಿ ನಡು ಉರಿಯಲ್ಲಿ ಐದು ನಿಮಿಶ ಬೇಯಿಸಿರಿ. ಈಗ ಇದಕ್ಕೆ ಒಂದೆರಡು ಕಪ್ ನೀರು ಹಾಕಿ, ನಡುಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ. ಈಗ ನಾವು ಹಾಕಿದ ತುಪ್ಪ ಗಸಿಯ ಮೇಲೆ ಬರುತ್ತದೆ. ಇಲ್ಲಿ ಆಗಾಗ ಮುಚ್ಚಳ ತೆಗೆದು, ಗಸಿಯನ್ನು ಗೂರಾಡಬೇಕು(ಅಲ್ಲಾಡಿಸಬೇಕು). ಇನ್ನೊಂದು ಐದು ನಿಮಿಶ ಬೇಯಿಸಿ ಒಲೆ ಆರಿಸಿ. ಇದಕ್ಕೆ ಬೇಕಾದಲ್ಲಿ ನಿಂಬೆ ಹುಳಿ ಹಾಕಿಕೊಳ್ಳಬಹುದು. ಈಗ ಬಿಸಿ ಬಿಸಿ ಚಿಕನ್ ಮಸಾಲೆ ತಯಾರಾಗಿದೆ. ಇದನ್ನು ಚಪಾತಿ ಮತ್ತು ಅನ್ನದ ಜೊತೆ ತಿನ್ನಲು ಬಹಳ ಚೆನ್ನಾಗಿರುತ್ತದೆ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: