ಮಿನಿಹನಿಗಳು

ವೆಂಕಟೇಶ ಚಾಗಿ.

ಬಣ್ಣ

ಮಹಾತ್ಮರ ನೆರಳಿಗೆ
ಬಿಸಿಲಿನ
ಬಣ್ಣ ಬಳಿಯಲಾಗಿದೆ
ನೆರಳು
ಕಾಣದಂತೆ..!!

*****

ಜೀವನ

ಅಂದದ್ದು ಅಳಿಯಲಿ
ನೊಂದದ್ದು ನಲಿಯಲಿ
ಅಂದಾಗ
ಈ ಜೀವನ
ಆಗುವುದು ನಲಿಕಲಿ..!!

*****

ನಿರ‍್ಮೂಲನೆ

ಕಿತ್ತೊಗೆಯ ಬೇಕಾದುದು
ಬೀತಿ ಅಲ್ಲ
ಜಾತಿ..!!

*****

ಬರಿ

ಬಗವಂತ
ಬರಿ ಹಾಕುವ ಮುನ್ನ
ಏನಾದರೂ
ಬರಿ..!!

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: