ಕವಿತೆ: ನಾನು ನಾನೆಂಬುವರು

– ಶ್ಯಾಮಲಶ್ರೀ.ಕೆ.ಎಸ್.

ಅಸೂಯೆ, jealous

ನಾನು ನಾನೆಂಬುವರು
ಜಗವೇ ತನ್ನದೆಂಬುವರು
ಕಾಯುವ ಜಗದೊಡೆಯನಿರಲು
ನಾವಾರು ನೀವಾರು
ಎಲ್ಲವೂ ಅವನಿತ್ತ ಬಿಕ್ಶೆ

ವಿದ್ಯೆ ಪದವಿಗಳ ಗಳಿಸಿ
‌ಆಸೆಗಳ ಬೆನ್ನತ್ತಿ
ಬ್ರಮೆಯಿಂದ ಮೂಡರಾಗಿ
ಸಾಗಿ ಬಂದ ದಾರಿಯ ಮರೆತು
ತೋರುವರು ಸ್ವಪ್ರತಿಶ್ಟೆ

ಸಿರಿವಂತಿಕೆ ಬಂದಾಗ ಮೆರೆದು
ಇದಿರ ಕೀಳಾಗಿ ಜರಿದು
ಅಹಂಬಾವದಿ ಬೀಗಲು
ಗಳಿಸಿದ ಗೌರವಗಳೂ ಹಿಂದೆ ಸರಿದು
ಎದುರಿಸುವರು ಜಗದೀಶನು ನೀಡುವ ಪರೀಕ್ಶೆ

ಮನವು ಕುರುಡಾಗಿ
ಹಿತನುಡಿಗಳಿಗೆ ಕಿವುಡರಾಗಿ
ವ್ಯಸನಗಳಿಗೆ ಬಲಿಯಾಗಿ
ಬಾಳಿನ ರಹದಾರಿಯಲ್ಲಿ ಎಡವಿ
ತಾವಾಗಿಯೇ ಪಡೆವರು ಶಿಕ್ಶೆ

( ಚಿತ್ರ ಸೆಲೆ : irishtimes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: