ನವಣೆ ಕೀರು
– ಸವಿತಾ.
ಬೇಕಾಗುವ ಸಾಮಾನುಗಳು
- ನವಣೆ ಹಿಟ್ಟು – 3 ಚಮಚ
- ಹಾಲು – 2 ಲೋಟ
- ನೀರು – 1/2 ಲೋಟ
- ಬೆಲ್ಲದ ಪುಡಿ – 4 ಚಮಚ
- ಏಲಕ್ಕಿ – 3
ಮಾಡುವ ಬಗೆ
ಮೊದಲಿಗೆ ನವಣೆ ಅಕ್ಕಿ ಹುರಿದು ಮಿಕ್ಸರ್ ನಲ್ಲಿ ನುಣ್ಣಗೆ ಹಿಟ್ಟು ಮಾಡಿಟ್ಟು ಕೊಳ್ಳಿರಿ. ಆಮೇಲೆ ಪಾತ್ರೆಗೆ ಅರ‍್ದ ಲೋಟ ನೀರು ಹಾಕಿ ಬಿಸಿ ಮಾಡಲು ಇಡಿ. ನಂತರ ನವಣೆ ಹಿಟ್ಟು ಹಾಕಿ. ಹಾಗೇ ಹಾಲು ಸೇರಿಸಿ. ಆಮೇಲೆ ಬೆಲ್ಲ ಹಾಕಿ, ಅದು ಕರಗಬೇಕು ಅಶ್ಟರ ವರೆಗೆ ಒಂದು ಕುದಿ ಕುದಿಸಿ ಇಳಿಸಿ. ಆಮೇಲೆ ಏಲಕ್ಕಿ ಪುಡಿ ಮಾಡಿ ಹಾಕಿ. ಈಗ ನವಣೆ ಹಾಲು ಅತವಾ ಕೀರು ಸವಿಯಲು ಸಿದ್ದ. ಇದನ್ನು ಪೂರಿ, ಚಪಾತಿ ಅತವಾ ಹೋಳಿಗೆ ಜೊತೆ ಸವಿಯಬಹುದು. ಇದು ತುಂಬಾ ಆರೋಗ್ಯಕರ ಕೀರಾಗಿದ್ದು ಮಕ್ಕಳಿಗೆ ಒಳ್ಳೆಯದು.
ಇತ್ತೀಚಿನ ಅನಿಸಿಕೆಗಳು