ಕವಿತೆ: ಹಲ್ಲಿಲ್ಲದ ಅಜ್ಜಂದಿರು

– .

ಸಾಯಂಕಾಲದ ಹೊತ್ತು
ಆಯ್ತೆಂದ್ರೆ ಸಾಕು
ಬಾಯಲ್ಲಿ ಹಲ್ಲಿಲ್ಲದ ಅಜ್ಜಂದಿರು
ಮನೆಯಲ್ಲಿ ಕೂರಕ್ಕಾಗದೆ
ಬಸ್ಟ್ಯಾಂಡ್ ಹತ್ತಿರದ
ಕಟ್ಟೆಗೆ ಅಂಟಿಕೊಳ್ಳುವರು

ಅಲ್ಲೇ ಹೋಟೆಲ್ಗಳಲ್ಲಿ
ಕೆಲವರು ಚಾ ಕುಡಿದ್ರೆ
ಇನ್ನೂ ಕೆಲವರು
ಊರಿಗೆಲ್ಲ ಬುದ್ದಿ ಹೇಳಿ
ಸ್ವಲ್ಪ ಸಾರಾಯಿ
ಹೊಟ್ಟೆಗೆ ಹಾಕೊಳುವರು

ಯೌವನದ ವಯಸ್ಸಿನಲ್ಲಿ
ಮೆಂಬರುಗಳು, ಲೀಡರುಗಳು
ಗಾಡಿ ಡ್ರೈವರ್ ಗಳು,
ಆದವರಿವರು
ಈಗ ಎಲ್ಲವನು ಮರೆತು
ಕಾಲಿ ಮಾತಿನ ಅಜ್ಜಂದಿರಿವರು

ಮಕ್ಳು ಮದುವೆ ಮಾಡಿ
ಮೊಮ್ಮಕ್ಕಳ ಚಿಂತೆ ಮಾಡುತ
ಬಾಲ್ಯ ಸ್ನೇಹಿತರ ಜೊತೆಗೂಡಿ
ಊರಿಂದೆಲ್ಲ ವಿಚಾರ ಮಾಡಿ
ಕಾಲ ಕಳೆಯುವ
ಮುಗ್ದ ಮನಸ್ಸಿನವರು

ಸಂಗಟನೆಗಳನ್ನು ಬಿಟ್ಟಾಕಿ
ಒಣ ರಾಜಕೀಯದಿಂದ ಬೇಸತ್ತು
ಸ್ವಾರ‍್ತ ರಾಜಕಾರಣಿಗಳ ಬಣ್ಣ ತಿಳಿದು
ಊರಿನ ಯುವಕರ
ಬವಿಶ್ಯದ ಬಗ್ಗೆ ಯೋಚಿಸುವ
ಶ್ರೀಮಂತ ಹ್ರುದಯದವರು

ಮಲಗುವ ಹೊತ್ತಾದರೂ
ಮಾತು ನಿಲ್ಲಿಸುವುದಿಲ್ಲ
ಹೊಟ್ಟೆ ಹಸಿದಾಗಲೇ
ಮನೆಯ ದಾರಿ
ಹತ್ತಿರ ಮಾಡಿಕೊಳ್ಳುವರು
ನಮ್ಮೂರ ಹಲ್ಲಿಲ್ಲದ
ಮುದಿ ವಯಸ್ಸಿನ ಅಜ್ಜಂದಿರು

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಕುಮಾರಸ್ವಾಮಿ says:

    ತುಂಬಾ ಚನ್ನಾಗಿದೆ

ಅನಿಸಿಕೆ ಬರೆಯಿರಿ: