ಮಾಡಿ ಸವಿಯಿರಿ: ಗೀ ರೈಸ್

– ಕಿಶೋರ್ ಕುಮಾರ್.

ಬೇಕಾಗುವ ಸಾಮಾನುಗಳು

ತುಪ್ಪ – 5 ಚಮಚ
ಎಣ್ಣೆ – 2 ಚಮಚ
ಪಲಾವ್ ಎಲೆ – 2
ಲವಂಗ – 4
ಚಕ್ಕೆ – 1 ಇಂಚು
ಗೋಡಂಬಿ – 10
ಹಸಿ ಮೆಣಸಿನಕಾಯಿ – 6
ಈರುಳ್ಳಿ – 2
ಶುಂಟಿ ಬೆಳ್ಳುಳ್ಳಿ ಪೇಸ್ಟ್ – 4 ಚಮಚ
ಅಕ್ಕಿ – 2 ಲೋಟ
ಪುದೀನ – ಸ್ವಲ್ಪ
ಹಾಲು – 1.5 ಲೋಟ

ಮಾಡುವ ಬಗೆ

ಕುಕ್ಕರ್ ಗೆ ತುಪ್ಪ, ಎಣ್ಣೆ, ಪಲಾವ್ ಎಲೆ, ಲವಂಗ ಚಕ್ಕೆ, ಗೋಡಂಬಿ, ಕತ್ತರಿಸಿದ ಈರುಳ್ಳಿ, ಶುಂಟಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಪುದೀನ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಅಕ್ಕಿ ಹಾಗೂ ಹಾಲನ್ನು ಸೇರಿಸಿ, ಹಾಲು ಅಕ್ಕಿಯೊಂದಿಗೆ ಬೆರೆಯುವವರೆಗೂ ಚೆನ್ನಾಗಿ ಕಾಯಿಸಿ. ನಂತರ 2 ಲೋಟ ನೀರು ಹಾಗೂ ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ, ಇದರ ಮೇಲೆ 1 ಚಮಚ ತುಪ್ಪ ಸೇರಿಸಿ, ಕುಕ್ಕರ್ ಮುಚ್ಚಿ, 2 ವಿಶಲ್ ಹೊಡೆಸಿ. ಈಗ ಗೀ ರೈಸ್ ಸವಿಯಲು ತಯಾರು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: