ಸೇಬು ಹಣ್ಣಿನ ಸಿಹಿ
– ಸವಿತಾ.
ಬೇಕಾಗುವ ಸಾಮಾನುಗಳು
ಹಾಲು – 3 ಲೋಟ
ಕಾರ‍್ನ್ ಪ್ಲೋರ್ – 10 ಚಮಚ
ಸೇಬು ಹಣ್ಣು – 1
ಸಕ್ಕರೆ – 6 ರಿಂದ 8 ಚಮಚ
ತುಪ್ಪ – 4 ಚಮಚ
ಬೌರ‍್ನ ವಿಟಾ ಪುಡಿ – 6 ಚಮಚ
(ಇಲ್ಲವೆಂದರೆ ಕೊಕೊ ಪುಡಿ ಹಾಕಬಹುದು)
ಮಾಡುವ ಬಗೆ
ಸೇಬು ಹಣ್ಣು ಸಿಪ್ಪೆ ತೆಗೆದು ಸಣ್ಣ ಹೋಳು ಮಾಡಿ ಮಿಕ್ಸರ್ ಗೆ ಹಾಕಿ ಮತ್ತು ಕಾರ‍್ನ್ ಪ್ಲೋರ್ ಹಿಟ್ಟು, ಬೌರ‍್ನ ವಿಟಾ ಇಲ್ಲವೇ ಕೊಕೊ ಪುಡಿ, ಸ್ವಲ್ಪ ಹಾಲು ಸೇರಿಸಿ ರುಬ್ಬಿ ತೆಗೆಯಿರಿ. ಹಾಲು ಕಾಯಲು ಇಟ್ಟು, ರುಬ್ಬಿದ ಮಿಶ್ರಣ ಹಾಕಿ. ಸಕ್ಕರೆ ಮತ್ತು ತುಪ್ಪ ಸೇರಿಸಿ ಗಟ್ಟಿಯಾಗುವವರೆಗೆ ಕುದಿಸಿ ಒಲೆ ಆರಿಸಿ. ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ ಅತವಾ ಕೈಯಿಂದ ದುಂಡನೆಯ ಅತವಾ ಚೌಕ ಆಕಾರ ಮಾಡಿ ಇಟ್ಟುಕೊಳ್ಳಿ. ಈಗ ಸೇಬು ಹಣ್ಣಿನ ಸಿಹಿ ಸವಿಯಲು ಸಿದ್ದ.
ಇತ್ತೀಚಿನ ಅನಿಸಿಕೆಗಳು