ಕವಿತೆ: ಏನೀ ಅನುಬಂದ
– ವಿನು ರವಿ.
ನಾ ಹೀಗೆ ಸುಮ್ಮನೆ ಇದ್ದೆ
ನೀ ಬರುವವರೆಗೂ
ಅರಳಿದ ಮಲ್ಲಿಗೆ ಹೂವಿಗೆ
ಮನಸೋತು ಮುಗುಳ್ನಗುತ್ತಾ
ಸೋನೆ ಮಳೆಯಲಿ
ತಣ್ಣಗೆ ಕೊರೆವ ಚಳಿಯಲಿ
ಕಣ್ಮುಚ್ಚಿ ತೋಯುತ್ತಾ
ಬಾನಲ್ಲಿ ಮೋಡಗಳ ಹಿಂದೆ
ಅವಿತ ತಾರೆಗಳ ಎಣಿಸುತ್ತಾ
ಕಲ್ಪನೆಗಳ ಒಳಗೆಲ್ಲ ಇಣುಕಿ
ಕವಿತೆಗೊಂದು ಸಾಲು ಹುಡುಕುತ್ತಾ
ನಾ ಹೀಗೆ ಸುಮ್ಮನೆ ಇದ್ದೆ
ನೀ ಬರುವವರೆಗೂ
ನೀ ಬಂದ ಮೇಲೆ
ನಾ ಬರೆದ ಕವಿತೆಗಳಿಗೆಲ್ಲಾ
ನಿನ್ನದೆ ಚಂದ
ನಿನ್ನದೆ ಬಂದ
ಏನೀ ಅನುಬಂದ
ಯಾವ ಜನ್ಮದ ಮೈತ್ರಿ ಬೆಸೆದ ಸಂಬಂದ
( ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು