ಕವಿತೆ: ನಲಿಯಲು ಬಂತಿದೋ ಸಂಕ್ರಾಂತಿ

– ಸವಿತಾ.

ಎಳ್ಳುಂಡೆ, ಎಳ್ಳು ಹೋಳಿಗೆ
ಮಾದಲಿ, ಶೇಂಗಾ ಹೋಳಿಗೆ
ಕಡಕ್ ರೊಟ್ಟಿ, ಕಡಲಿ ಉಸುಳಿ
ಬದನೆಕಾಯಿ ಬರ‍್ತಾ, ಗಜ್ಜರಿ ಚಟ್ನಿ
ಮೇಲೆ ಮೊಸರು, ಶೇಂಗಾ ಹಿಂಡಿ

ಮತ್ತಿತರೆ ಬಕ್ಶ್ಯ ಬೋಜನವ ಸವಿದು
ಸಂತಸದಿ ಸವಿ ಮಾತನಾಡುತ
ಎಳ್ಳು ಬೆಲ್ಲ ಬೀರಿ
ಕಶ್ಟ ಕಳೆದು ನೀಗಲಿ
ಆರೋಗ್ಯ-ಸಂಪತ್ತು ಚೇತನಾದಿಯಾಗಿ
ಎಲ್ಲ ಸುಕ ಬಯಸಿ ಬರಲಿ

ಉತ್ತರಾಯಣ ಕಾಲವು
ಉತ್ತರೋತ್ತರ ಅಬಿವ್ರುದ್ದಿ ತರಲೆಂದು ಕೋರಿ
ಸುಗ್ಗಿ ಹಬ್ಬದ ಸಂಬ್ರಮವ ಸಾರಿ
ಗಾಳಿ ಪಟ ಹಾರಿಸಿ
ನಲಿಯಲು ಬಂತಿದೋ ಸಂಕ್ರಾಂತಿ
ಹರುಶವ ಹಂಚಿ

(ಚಿತ್ರ ಸೆಲೆ: thehindu.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: