ಕವಿತೆ: ನಗುತಿರು ನನ್ನರಸಿ
ನೀ ಅಚ್ಚರಿಗೊಂಡು
ಬೆರಗುಗಣ್ಣುಗಳಿಂದ ನೋಡಿದಾಗ
ಆ ಸೊಬಗನ್ನು ಕಣ್ತುಂಬಿಸಿಕೊಳ್ಳಲು
ಹಾತೊರೆಯುವೆನು ನಾನು
ನೀ ತುಂಟ ನಗು ನಕ್ಕರೆ ಸಾಕು
ನನ್ನ ಎದೆತುಂಬಿ ಬರುವುದು
ನನ್ನ ಪ್ರೀತಿಯ ಕಟ್ಟೆ ಒಡೆದು
ಆ ಒಲವಿನ ಒಸರು ತೊರೆಯಂತೆ ಹರಿದು
ನಿನ್ನ ಸೇರುವುದು
ನೀ ಅರಳು ಹುರಿದಂತೆ ಮಾತಾಡಲು
ಕ್ಶಣಕಾಲ ಮೂಗನಾಗುವೆನು, ಓ ಶುಬಾಶಿಣಿ
ನಿನ್ನ ಸಿಹಿ ದನಿಯ ಬೈಗುಳವೂ
ನನ್ನ ಕಿವಿಗೆ ಇಂಪೇ
ನಿನ್ನ ಹುಸಿಮುನಿಸನ್ನೇನೋ ಸಹಿಸಬಲ್ಲೆನು
ಆದರೆ ನಿನ್ನ ಸಿಟ್ಟು ನೆನೆದರೆ,
ಎದೆಯೆಲ್ಲಾ ದಿಗಿಲು
ಆ ದುಗುಡ, ಆ ಗಾಬರಿ ಹೇಳತೀರದು
ಬೇಡ ಗೆಳತಿ ಈ ಹುಡುಗಾಟ
ಇನ್ನು ಕಾಡದಿರು ನನ್ನ
ಬೇಕೆನಗೆ ನಿನ್ನ ಪ್ರೀತಿಯ ಹಿತ
ಆ ಬೆಚ್ಚನೆಯ ಅಪ್ಪುಗೆ
ನನ್ನೊಡತಿ, ನೀ ನಗುತಿರು
ಪ್ರಪಂಚದ ಪರಿವಿಲ್ಲದೆ
ಸದಾ ನಗುತಿರು, ಸಂತಸದಿಂದಿರು
ನನ್ನೊಲವಿನ ಅರಸಿ.
(ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು