ಕವಿತೆ: ಓ ನನ್ನ ಒಲವೇ

– ಮಹೇಶ ಸಿ. ಸಿ.ಒಲವು, ವಿದಾಯ, Love,

ನೆನಪಿಲ್ಲದ ದಿನವಿಲ್ಲ
ಮೈ ಮರೆತ ಕ್ಶಣವಿಲ್ಲ
ನೀ ಎನ್ನ ಮನದೊಳಗಿರಲು
ನಿದಿರೆಯಲು ನೆನೆಯುವೆ
ಅನುಕ್ಶಣವು ಮರೆಯದೆ
ಮರೆತು ಹೋಗಲು ಕಾರಣವಿಲ್ಲ
ನಿನ್ನ ಮರೆತು ಹೋಗಲು ಕಾರಣವಿಲ್ಲ

ನೆನೆಯುವೆನು ದಿನವೆಲ್ಲಾ
ಮನದೊಳಿರುವೆ ಸುಳ್ಳಲ್ಲ
ಒಂದೆರಡು ಪಿಸುಮಾತು ಬೇಕೆನಗೆ
ನನ್ಮನದ ವೇದನೆಯ
ನೀನೇಕೆ ಅರಿತಿಲ್ಲ
ಬಿಟ್ಟು ಹೇಗಿರುವುದು ತಿಳಿದಿಲ್ಲ
ನಿನ್ನ ಬಿಟ್ಟು ಹೇಗಿರುವುದು ತಿಳಿದಿಲ್ಲ

ತಪ್ಪೇನು ಮಾಡಿಲ್ಲ
ದೂರ ತಳ್ಳುವುದು ತರವಲ್ಲ
ನಿನಗಾಗಿ ಬದುಕಿರುವುದು ಜೀವವೆ
ನೀನಿಲ್ಲದೆ ಹೋದರೆ
ನಾನೆಗೆ ಬದುಕಿರಲಿ
ಬಿಟ್ಟು ಹೋಗದಿರು ಎನ್ನ ಜೀವ
ನನ್ನ ಬಿಟ್ಟು ಹೋಗದಿರು ಎನ್ನ ಜೀವ

ನಿನಗಾಗಿ ಕಾದಿಹೆನು
ಅನುಕ್ಶಣವು ಮನದಲ್ಲಿ
ಬರುವುದು ಎಂದೂ ನೀನು ತಿಳಿಸು
ಬಂದೊಡನೆ ಬಿಗಿದಪ್ಪುವೆ
ತಪ್ಪಾ ಮನ್ನಿಸು ನೀನು
ದೂರ ಮಾಡದಿರು ನಮ್ಮೊಲವ
ನೀನು ದೂರ ಮಾಡದಿರು ನಮ್ಮೊಲವ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: