ಕವಿತೆ: ಜೀವಗಾತೆ

ವೇಣು ಜಾಲಿಬೆಂಚಿ

 


ಇದೆಂತಾ ಜೀವನ? ​
ಇಲ್ಲಿ ದಿನವೂ ಕಾಯುತ್ತಿರಬೇಕು!​
ಗುರಿ ಸಿಗಲಿ ಸಿಗದಿರಲಿ ​
ನಗು ನಗುತ ಸಾಗುತಿರಬೇಕು!​

ಆದರೂ ಏನಿದೆ ಈ ಬದುಕಿನಲ್ಲಿ? ​
ಒಬ್ಬರಾದರೂ ಬಂದು ಎದೆಯನಪ್ಪಿಕೊಳ್ಳುವವರಿಲ್ಲ!​
ಕಣ್ಣೀರ ಬಾರ ಹೊರುವವರೂ ಇಲ್ಲ!​
ಹಾಗೇ ಸುಮ್ಮನೆ…ಹೆಜ್ಜೆಗೊಂದು ಹೆಜ್ಜೆ ಇಡುತ್ತ ​
ನಮ್ಮ ನಮ್ಮ ಕನಸುಗಳನ್ನು ದಿನಪೂರ‍್ತಿ ನೋಡುತ್ತ ​
ಕಾಲ ನೂಕುತಿರಬೇಕು!​

ಆಹಾ…..! ಇದು ಎಂತಾ ಮಾತು ನೋಡಿ ​
ಬದುಕಿನ ಕರಿನೆರಳಿನಿಂದ ಪಾರಾಗಲು ​
ಕಾಲದ ಕಾಲುಗಳಡಿ ಅವಿತುಕೊ!​
ಒಂದೊಮ್ಮೆ ಎದುರಾದರೆ ಕಾಲಕ್ಕೆ ಬುಸುಗುಟ್ಟುತ್ತದೆ!​
ಇದರ ವಿಶ ಹಾವಿಗಿಂತಲೂ ಅತಿ ಬಯಂಕರ!​

ನಾನು ಆ ದಿನಕ್ಕಾಗಿ ಕಾಯುತ್ತಿರುವೆ ​
ದಿನದೆಲ್ಲ ತುಟಿಗಳೂ ನನ್ನವಾಗಿ​
ಕೇವಲ ನನಗಾಗಿ ಮಾತ್ರ ​
ತುಂಬು ಹ್ರುದಯದಿಂದ ನಗುವ ​
ಹ್ರುದಯದ ಬಾಗಿಲು ತೆರೆಯುವ ​
ಎಲ್ಲ ಕಾಮನೆಗಳ ಪೂರೈಸುವ ದಿನಕ್ಕಾಗಿ!​

ಈಗ ನೀವೂ ಆಸೆಗಳ ಆದೇಶ ಹಿಡಿದು​
ದಿನದ ತಳ್ಳಾಟದಲಿ ಕಾಲ ಕಳೆಯಬೇಡಿ!​
ಬದಲಿಗೆ ನೀವೂ ನಕ್ಕು ಇತರರನೂ ನಗಿಸಿ​
ಯಾಕೆಂದರೆ,​
ಈಗ ದಿನಗಳು ನಮ್ಮ ಕೈಯಲ್ಲಿ ಉಳಿದಿಲ್ಲ!​
ಬೆಳಕು ನೀಡುವ ರವಿಯೂ ​
ಸೆರೆಮನೆಯಲಿ ಬಂದಿಯಾಗಿ ​
ಸೆರೆವಾಸ ಅನುಬವಿಸುತ್ತಿದ್ದಾನೆ!?

( ಚಿತ್ರಸೆಲೆ : thriveglobal.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: