ಕವಿತೆ: ಗುಲಾಬಿ ಹೂವೆ

– ಮಹೇಶ ಸಿ. ಸಿ.

ಹೂವೇ ಹೂವೇ ಗುಲಾಬಿ ಹೂವೆ
ಅಂದದಿ ಕಾಣುವ ಚೆಂದದ ಹೂವೆ
ಅಂಗಳದಿ ಇರುವ ಬಿರಿದಾ ಹೂವೆ
ಮುತ್ತಿನ ಹೊಳಪಿನ ಹನಿಗಳ ಹೂವೆ

ನಿನ್ನನು ಕಾಯಲು ನೂರಾರು ಬಟರು
ನಿತ್ಯವು ನಿನ್ನನು ರಕ್ಶಿಸುತಿರುವರು
ಮುಟ್ಟಲು ಬರುವ ಕೈಗಳ ಬಿಡದೆ
ಶಿಕ್ಶಿಸಿ ದೂರಕೆ ಕಳುಹಿಸುವ ಬಟರು

ಕೆಂಪು ಹಳದಿ ಗುಲಾಬಿ ಹೂವೆ
ಹಲವು ಬಣ್ಣದ ನೂರಾರು ಹೂವೆ
ಹೂದೋಟದ ಅಂದವ ಹೆಚ್ಚಿಸೊ ಹೂವೆ
ಕಣ್ಮನ ತಣಿಸುವ ಬಗೆ ಬಗೆ ಹೂವೆ

ನೋಡುತ ನಿಂತರೆ ನಿನ್ನಯ ಮೊಗವ
ಮರೆವೆವು ಸಾವಿರ ನೋವನು ಹೂವೆ.
ಮನಸಿಗೆ ಹಿಡಿಸಿದ ನಿನ್ನಯ ಗುಣದಲಿ
ನಮ್ಮನು ನಮಗೇ ಮರೆಸುವ ಪುಶ್ಪವೆ

ದೈವ ಕರುಣಿಸೋ ದೇವರ ಮುಡಿಗೋ
ಉಸಿರು ನಿಂತ ಸ್ಮಶಾನದ ಹೆಣಕೋ
ಹೆಂಗಳೆಯರ ಶಿರದ ಆಸನ ಪೀಟಕೊ
ಅದಿಪತಿ ನೀನು ಗುಲಾಬಿಯ ಹೂವೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: