ಕೋಳಿ ಗೊಜ್ಜು

– ಕಿಶೋರ್ ಕುಮಾರ್.

ಏನೇನು ಬೇಕು

  • ಚಿಕನ್ – ½ ಕಿಲೋ
  • ಈರುಳ್ಳಿ – 2
  • ಟೊಮೆಟೊ – 3
  • ಹಸಿ ಮೆಣಸಿನಕಾಯಿ – 4
  • ಒಣ ಮೆಣಸಿನಕಾಯಿ ಪುಡಿ/ಕೆಂಪು ಕಾರದ ಪುಡಿ – 2 ಚಮಚ
  • ಗರಂ ಮಸಾಲ – ½ ಚಮಚ
  • ತೆಂಗಿನಕಾಯಿ – 2 ಚೂರು
  • ಏಲಕ್ಕಿ – 1
  • ಲವಂಗ – 2
  • ಚಕ್ಕೆ – ಸ್ವಲ್ಪ
  • ಶುಂಟಿ – ಸ್ವಲ್ಪ
  • ಬೆಳ್ಳುಳ್ಳಿ – 4 ಎಸಳು
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಅರಿಶಿಣದ ಪುಡಿ – ಸ್ವಲ್ಪ

ಮಾಡುವ ಬಗೆ

ಒಂದು ಮಿಕ್ಸಿ ಜಾ‍ರ್ ಗೆ ತೆಂಗಿನಕಾಯಿ, ಏಲಕ್ಕಿ, ಲವಂಗ, ಚಕ್ಕೆ, ಶುಂಟಿ, ಬೆಳ್ಳುಳ್ಳಿ ಹಾಗೂ ಕೊತ್ತಂಬರಿಸೊಪ್ಪು ಹಾಕಿ ರುಬ್ಬಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಕಾದ ಎಣ್ಣೆಗೆ ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಗೂ ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊ ಹಾಕಿ ಹುರಿಯಿರಿ. ಈಗ ಚಿಕನ್, ಅರಿಶಿಣದ ಪುಡಿ ಹಾಗೂ ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಚಿಕನ್ ಬೇಯುವ ತನಕ ಹುರಿಯಿರಿ. ನಂತರ ಒಣ ಮೆಣಸಿನಕಾಯಿಪುಡಿ ಮತ್ತು ಗರಂ ಮಸಾಲ ಸೇರಿಸಿ 2 ನಿಮಿಶ ತಿರುಗಿಸಿ. ಈಗ ರುಬ್ಬಿಟ್ಟಿರುವ ಮಸಾಲೆಯನ್ನು ಸೇರಿಸಿ, ಬೇಕಾದಶ್ಟು ನೀರು ಸೇರಿಸಿ ಕುದಿಯಲು ಬಿಡಿ. ಈಗ ರುಚಿಯಾದ ಕೋಳಿ ಗೊಜ್ಜು ಸವಿಯಲು ರೆಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: