ಹನಿಗವನಗಳು

ಹರೀಶ್ ನಾಯಕ್, ಕಾಸರಗೋಡು.

*** ಹಾರ್‍ಲಿಕ್ಸ್ ***

ನಿಮ್ಮ ಮಕ್ಕಳನ್ನು
ನೀವೇ ತಿದ್ದಿ
ಹಾರ‌್ಲಿಕ್ಸ್ ಕುಡಿದರೆ
ಬರುವುದಿಲ್ಲ ಬುದ್ದಿ

*** ಚುನಾವಣೆ ***

ಗೆದ್ದವ
ನಾಯಕ
ಗೆಲ್ಲಿಸಿದವ
ಅಮಾಯಕ

*** Luxury ***

ನನ್ನಾಕೆ ಅಂದಳು
ಸ್ನಾನಕ್ಕೆ ಸೋಪ್ ಬೇಕು
ಅದು Lux ರೀ
ನಾನಂದೆ
ಕಡಿಮೆ ರೇಟಿನದ್ದು ತರುವೆ
ನಾನಲ್ಲ Luxury

*** ದಾಂಪತ್ಯ ***

ಗಂಡ ಎಕ್ಸಿಲೇಟರು
ಹೆಂಡತಿ
ಬ್ರೇಕು
ದಾಂಪತ್ಯ ಮುಂದೆ
ಸಾಗಲು ಎರಡೂ ಸರಿ
ಇರಬೇಕು

** ಮದುವೆ ***

ಮದುವೆಯ ಹೊಸದರಲ್ಲಿ
ಇಶ್ಟವಾಗುತ್ತವೆ
ಪಾರ್‍ಕು ಬೀಚು
ಹಳತಾದಂತೆ
ಸಮಯವೇ ಹೋಗುವುದಿಲ್ಲ
ಆಗಾಗ ನೋಡುತ್ತೇವೆ ವಾಚು

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *