ಉಪ್ಪು ಕಾರದ ಕೋಳಿ
ಏನೇನು ಬೇಕು
- ಕೋಳಿ ಬಾಡು – ½ ಕಿಲೋ
- ಈರುಳ್ಳಿ – 1
- ಅಡುಗೆ ಎಣ್ಣೆ
- ಉಪ್ಪು
- ನೀರು
- ಮೆಣಸಿನಕಾಯಿ ಪುಡಿ / ಕಾರದ ಪುಡಿ
ಮಾಡುವ ಬಗೆ
ಕೋಳಿ ಬಾಡನ್ನು ಚೆನ್ನಾಗಿ ತೊಳೆದು, ನೀರನ್ನು ಸೋಸಿಟ್ಟುಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ ಸೇರಿಸಿ, ಕಾಯಿಸಿ. ಕಾದ ಎಣ್ಣೆಗೆ ಕುಯ್ದಿಟ್ಟುಕೊಂಡಿದ್ದ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ. ಈಗ ಕೋಳಿ ಬಾಡನ್ನು ಸೇರಿಸಿ ತಿರುಗಿಸುತ್ತಾ, ಚೆನ್ನಾಗಿ ಹುರಿಯಿರಿ. ಆಗಾಗ ತಳ ಸೀಯದ ಹಾಗೆ ಸ್ವಲ್ಪ ನೀರು ಸೇರಿಸಿ. ಈಗ ರುಚಿಗೆ ತಕ್ಕಶ್ಟು ಉಪ್ಪು, ಮೆಣಸಿನಕಾಯಿ ಪುಡಿ ಹಾಕಿ ಹುರಿಯಿರಿ. ಬಾಡು ಬೇಯುವ ತನಕ ಹುರಿದು, ಒಲೆ ಆರಿಸಿ. ಈಗ ಉಪ್ಪು ಕಾರದ ಕೋಳಿ ಸವಿಯಲು ರೆಡಿ. ಕಡಿಮೆ ಸಮಯದಲ್ಲಿ ಮಾಡಿಕೊಳ್ಳಬಹುದಾದ ಅಡುಗೆಗಳಲ್ಲಿ ಇದೂ ಒಂದು.
ಇತ್ತೀಚಿನ ಅನಿಸಿಕೆಗಳು