ಅಮ್ರುತ ಪಲ

– ಸವಿತಾ.

ಬೇಕಾಗುವ ಸಾಮಾನುಗಳು

ಹಾಲು – 1 ಲೋಟ
ತೆಂಗಿನ ತುರಿ – 1 ಲೋಟ
ಬೆಲ್ಲದ ಪುಡಿ – 1 ಲೋಟ
ತುಪ್ಪ – 2 ಚಮಚ
ಏಲಕ್ಕಿ – 2

ಮಾಡುವ ಬಗೆ

ತೆಂಗಿನ ಕಾಯಿ ತುರಿದು ಸ್ವಲ್ಪ ನೀರು ಸೇರಿಸಿ ಮಿಕ್ಸರ‍್ ನಲ್ಲಿ ನುಣ್ಣಗೆ ರುಬ್ಬಿಕೊಂಡು, ಸೋಸಿ ತೆಂಗಿನ ಹಾಲು ತೆಗೆದು ಇಟ್ಟುಕೊಳ್ಳಿ. ಮತ್ತೇ ಇನ್ನೊಮ್ಮೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.

ಹಾಲು ಕುದಿಯಲು ಇಟ್ಟು, ನಂತರ ತೆಂಗಿನ ಹಾಲು, ರುಬ್ಬಿ ದ ತೆಂಗಿನ ಮಿಶ್ರಣ ಸೇರಿಸಿ, ಅರ‍್ದ ಆಗುವವರೆಗೆ ಕುದಿಸಿ.

ಒಂದು ಚಮಚ ತುಪ್ಪ ಹಾಕಿ,ತಿರುಗಿ ಸುತ್ತಾ ಇರಿ. ಗಟ್ಟಿ ಆದ ಹಾಗೆ ಬೆಲ್ಲ ಹಾಕಿ ತಿರುಗಿಸಿ. ಎಲ್ಲ ಹೊಂದಿಕೊಂಡು ಗಟ್ಟಿಯಾಗಿ ಚಕಳಿ ಕತ್ತರಿಸಲು ಬರುವಂತೆ ಆದಾಗ ಏಲಕ್ಕಿ ಪುಡಿ ಮಾಡಿ ಹಾಕಿ ಒಲೆ ಆರಿಸಿ, ಇಳಿಸಿ . ಒಂದು ತಟ್ಟೆ ಗೆ ತುಪ್ಪ ಸವರಿ, ಇನ್ನೊಮ್ಮೆ ಎಲ್ಲವನ್ನು ಚೆನ್ನಾಗಿ ತಿರುಗಿಸಿ ಸುರುವಿ ತಟ್ಟಿ, ಚೌಕಾಕಾರ ಅತವಾ ಡೈಮಂಡ್ ಆಕಾರ ಕೊಟ್ಟು ಕತ್ತರಿಸಿ. ಈಗ ಅಮ್ರುತ ಪಲ ಸಿಹಿ ತಿನಿಸು ಸವಿಯಲು ಸಿದ್ದ. ಸ್ವಾದಿಶ್ಟವಾದ ಸಿಹಿ ಅಮ್ರುತ ಪಲ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks