ಕವಿತೆ: ಗುಳಿಕೆನ್ನೆಯ ಚೆಲುವೆ

ಕಿಶೋರ್ ಕುಮಾರ್.

ಗುಳಿಕೆನ್ನೆಯ ಚೆಲುವೆ
ಮನವ ತಣಿಸುತಲಿರುವೆ
ಮಾತಾಡು ಪದಗಳಿಗೇನು ಬರವೇ

ಕಣ್ಣಲ್ಲೇ ಮೀಟಿದೆ ಬಾಣ
ಮಾತಿಲ್ಲದೆ ನಾನಾದೆ ಮೌನ
ಏನಿದೆಲ್ಲ ಹೇಳುವೆಯ ಕಾರಣ

ಮುಡಿಸೇರೋ ಹೂವಿನ ಗಮಲು
ಹೆಚ್ಚಾಯ್ತು ನಿನ ನಗುವ ನೋಡಲು
ದಿನ ದಿನವೂ ಹೆಚ್ಚಿದೆ ನಿನ್ನದೇ ಅಮಲು

ಗುಂಡಿಗೆಯ ಗೂಡಿಗೆ ಕಿವಿಯಿಟ್ಟು ಕೇಳು
ಇರುವುದೆಲ್ಲ ಬರೀ ನಿನ ಬಗೆಗಿನ ಸಾಲು
ನಲಿವಿನ ಕಡಲಲ್ಲಿ ತೇಲಿದೆ ಈ ಬಾಳು

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: