ವಚನಗಳು

– .

ದೇವರು. ಪ್ರಾರ‍್ತನೆ, ಕೋರಿಕೆ, prayer, god

*** ನೀನಯ್ಯ ***

ಮಾಡುವ ಕಾಯಕವಶ್ಟೇ ನಮ್ಮದಯ್ಯ
ಮಾಡಿದಶ್ಟು ನೀಡುವ ಬಿಕ್ಶೆ ನಿನ್ನದಯ್ಯ
ಮಾಡದೇ ಬೇಡಿದರೆ ನೀಡದಿರಯ್ಯ
ದುಡಿಯುವ ಕೂಲಿಯೂ ನಾವಯ್ಯ
ಮಾಡಿಸುವ ಮಾಲಿಯು ನೀನಯ್ಯ
ಶ್ರೀ ತರಳಬಾಳು ಸದ್ಗುರುವೇ ಕೇಳಯ್ಯ

*** ಹುಂಬರು ***

ಉಚ್ಚರು ತಾವುಗಳೆಂಬ
ಹುಚ್ಚು ಬ್ರಮೆಯಲ್ಲಿರುವ
ತುಚ್ಚ ಮನದ ಹುಂಬರನು
ಮೆಚ್ಚಲಾರರು ನೋಡಯ್ಯ
ಶ್ರೀ ತರಳಬಾಳು ಸದ್ಗುರುವು

*** ನಾಲಿಗೆ ***

ಹರಿತವಾಗಿರುವ ಚೂರಿಗಿಂತಲೂ
ಹರಿಬಿಡುವ ಎಲುಬಿಲ್ಲದ ನಾಲಿಗೆಗೆ
ನರರು ಅಂಜಿ ನಡೆಯದಿದ್ದರಯ್ಯ
ನರರ ಬಾಳೆಂಬುದು ನರಕವಯ್ಯ
ಹರರೂಪಿ ಶ್ರೀ ತರಳಬಾಳು ಸದ್ಗುರುವೇ
ಅರೆಕ್ಶಣಕ್ಕೊಮ್ಮೆ ನಿಮ್ಮ ನೆನೆಯುವಂತೆ
ನರರ ನಾಲಿಗೆಯಿರಿಸಿ ಉದ್ದರಿಸಯ್ಯ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಅನಂತ ಕೃತಜ್ಞತೆಗಳು ಗುರುಗಳೇ

ಅನಿಸಿಕೆ ಬರೆಯಿರಿ: