ಕಿರುಗವಿತೆಗಳು

– ನಿತಿನ್ ಗೌಡ.

ಪರಸಿವನ ಒಡಲು

ಬಗೆಯದಿರಲು ಕೆಡುಕನು,
ನುಡಿಯದಿರಲು ಸೊಲ್ಲು
ಮನಬಂದಂತೆ;
ಬಣ್ಣಿಸದಿರಲು ನಿನ್ನ ಹಿರಿಮೆಯ,
ಹಳಿಯದಿರಲು ಪರರ ಗರಿಮೆಯ
ಅರಿಯಲು ಮೌನದ ಮಾತಾ,
ಗದ್ದಲದ‌ ನಡುವೆ;
ಮಾಡಲು ಕಾಯಕವ
ಚಿತ್ತದಿಂದ, ಪಲವ ಬಯಸದೆ
ಸೇರುವುದು ಕಾಣು ನಿನ್ನ ಜ್ಯೋತಿ
ಪರಸಿವನ ಒಡಲು

*******

ಬೆವರ ಹನಿ

ಬಯಸುತ ಮಳೆಯ ಹನಿಯ
ಕಡೆಯುತ ಇಳೆಯ ಒಡಲ
ಹರಿಸುತ ಬೆವರ ಹನಿಯ
ಉತ್ತಿ-ಬಿತ್ತುವ ಬೆಳೆಯ ಒಕ್ಕಲಿಗ
ಕಾಯುವ ಕಾತುರದಿ
ಲೋಕಕುಣಬಡಿಸಲು
ಸಾರ‌್ತಕತೆಯ ಪಸಲ
ತಣಿಸುವುದದು ಲೋಕದೊಡಲ

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: