ಕಿರುಗವಿತೆಗಳು
– ನಿತಿನ್ ಗೌಡ.
**ತಂಬೆಲರು**
ಮಾಗಿರುವ ಮನಕೆ, ಇನ್ನೂ ನೋವೇಕೆ;
ಬೆಂದಿರುವ ಬೇಗೆ ತಣಿಸಲು,
ಬೀಸು ನೀ ನಿನ್ನೊಲವ ತಂಬೆಲರು
**ಒಲವ ವೀಣೆ**
ನುಡಿಯುತಿದೆ ಮನದೊಲವ ವೀಣೆ
ನೀ ಮೀಟಿದೊಡನೆ, ಇಂಪಾಗಿ…
ಅಳುವಾಗಲಿದೆ, ನಗುವಾಗಲಿದೆ
ಹುರುಪಾಗಲಿದೆ ರಾಗಸುದೆಯ ಮಿಡಿತ..
ಇರುವುದಿದರ ಹಿಂದಿನ ಗುಟ್ಟು, ನೀ ಮೀಟುವ ಶ್ರುತಿಯಲಿ
**ಒಲವ ಕದ**
ನನ್ನೊಲವ ಕದವ ತೆರೆದಿಹೆನು..
ಬರಮಾಡಿಕೊಳ್ಳವೆನು, ಸಂತಸದಿ ನಿನ್ನನು..
ಆಗಲಿ ನನ್ನೊಲವ ಸೂರಿನೊಕ್ಕಲು
ನೀ ಅಡಿ ಇಡುವುದೆ,ಕಾಯುತಿಹೆನು
ತಡಮಾಡದೇ ನೀ ನೀಡು ಹಾಜರಿ
( ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು