ಕವಿತೆ: ಸುಗ್ಗಿ ಸಂಕ್ರಾಂತಿ

ಮಂಜುಳಾ ಪ್ರಸಾದ್.

ಸಂಕ್ರಾಂತಿ, Sankranti

ಹಿಗ್ಗು ತರಲು ಬುವಿಯ ಮೇಲೆ
ಸುಗ್ಗಿ ಕಾಲ ಬಂದಿದೆ
ಮೊಗ್ಗು ತಾನು ಅರಳಿ ನಿಂತು
ಸಗ್ಗವಿಲ್ಲೆ ಎಂದಿದೆ

ಮಕರ ರಾಶಿ ಸೇರಿ ಸೂರ‍್ಯ
ಸಕಲ ಜಗವ ಪೊರೆಯುವ
ನಿಕಟ ಶಾಕ ದರೆಗೆ ಬಿತ್ತಿ
ಮುಕುರದಂತೆ ಹೊಳೆಯುವ

ಗಾಳಿಪಟವು ಗಗನದಲ್ಲಿ
ಗೂಳಿಯಂತೆ ನುಗ್ಗಿದೆ
ಬಾಳಿಗೊಂದು ನಲಿವು ಬಂದು
ಕಾಳರಾತ್ರಿ ಕಳೆದಿದೆ

ಹಳ್ಳಿ ಜನರ ಕಣವ ಕಂಡು
ಬಳ್ಳಗಳವು ಹಿಗ್ಗಲಿ
ಎಳ್ಳು ಬೆಲ್ಲ ಕಬ್ಬು ಅವರೆ
ಒಳ್ಳೆಯದನು ಮಾಡಲಿ

( ಚಿತ್ರ ಸೆಲೆ: apk-cloud.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: